ಪ್ರಖರ ಹೆಚ್ಚುತ್ತಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಗರಿಷ್ಠ 40 ಡಿಗ್ರಿ ಸಲ್ಸಿಯಸ್‌ನಷ್ಟು ತಾಪಮಾನ ದಾಖಲಾಗುತ್ತಿದೆ. ಅಲ್ಲದೇ ಮೂರು
ದಿನಗಳ ಹಿಂದೆಯಷ್ಟೇ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಏಳೂವರೆ ದಶಕದ ಹಿಂದಿನ ಸಾರ್ವಕಾಲಿಕ ದಾಖಲೆಯನ್ನು
ಸರಿಗಟ್ಟಿದೆ.
Advertisement
ಹೌದು. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿ ತಾಪಮಾನವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಏಪ್ರಿಲ್‌ನಲ್ಲಿ ಸಹಜವಾಗಿ ಗರಿಷ್ಠ 38ರಿಂದ 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಗುರುವಾರ 41 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಬಳಿಕ ಶುಕ್ರವಾರ ಮತ್ತು ಶನಿವಾರವೂ ಗರಿಷ್ಠ 40 ಡಿಗ್ರಿ ಉಷ್ಣಾಂಶದಾಖಲಾಗಿದೆ. ಏಳೂವರೆ ದಶಕಗಳ ಹಿಂದೆ(1941ರಲ್ಲಿ)
ಗದಗ-ಬೆಟಗೇರಿ ಅವಳಿ ನಗರದಲ್ಲಿ 41.01 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ದಾಖಲಾಗಿತ್ತು. ಇದೇ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. 2016ರ ಏಪ್ರಿಲ್‌ನಲ್ಲಿ 40.5 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.
Related Articles
Advertisement
ಬಿಸಿಲಿನ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿಸಿಕೊಳ್ಳಲು ಚಿಣ್ಣರು, ಯುವಕರು ಇಲ್ಲಿನರಾಜೀವಗಾಂಧಿ ನಗರ, ವಸಂತನಗರದಲ್ಲಿರುವ ಈಜುಕೊಳ ಸೇರಿದಂತೆ ವಿವಿಧ ಬಾವಿಗಳತ್ತ ಮುಖ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಿರಂತರ ಮಳೆ
ಕೊರತೆಯಿಂದ ಬರಗಾಲ ಆವರಿಸಿರುವುದೂತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಾರಿ ಏಪ್ರಿಲ್ ಆರಂಭದಿಂದಲೇ ಸರಾಸರಿ 37-39ರಷ್ಟುಸರಾಸರಿ ಉಷ್ಣಾಂಶ ಮುಂದುವರೆಯುತ್ತಿದೆ. ಕಳೆದ ಮೂರು ದಿನಗಳಿಂದ ಬಿಸಲಿನ ತಾಪಹೆಚ್ಚುತ್ತಲೇ ಇದೆ. ಇದೀಗ 40, 41 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುತ್ತಿದ್ದು, ಮೇ ತಿಂಗಳ
ಮೊದಲ ವಾರದೊಳಗಾಗಿ ಒಂದೆರಡು ದೊಡ್ಡ ಮಳೆಯಾಗದಿದ್ದರೆ, 42-43ರಷ್ಟು
ಉಷ್ಣಾಂಶ ದಾಖಲಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿ.