Advertisement

ಅಚನೂರ ಯೋಜನೆಗೆ 401 ಕೋಟಿ: ಪ್ರಸ್ತಾವನೆ

09:47 AM Jun 26, 2019 | Team Udayavani |

ರಾಂಪುರ: ಆಲಮಟ್ಟಿ ಜಲಾಶಯ ಹಿನ್ನೀರಿನಿಂದ 14 ಗ್ರಾಮಗಳ 8450 ಹೆಕ್ಟೇರ್‌ ಭೂಮಿಗೆ ಅಚನೂರ (ಭಗವತಿ) ಏತ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಜುಲೈ ಮೊದಲ ವಾರದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಇಂಜಿನಿಯರ್‌ ಆರ್‌.ಪಿ. ಕುಲಕರ್ಣಿ ತಿಳಿಸಿದರು.

Advertisement

ಮಾಜಿ ಶಾಸಕ ಹಾಗೂ ಹೋರಾಟ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನೊಳಗೊಂಡು ಸೋಮವಾರ ಆಲಮಟ್ಟಿ ಕೆಬಿಜಿಎನ್‌ಎಲ್. ಕಚೇರಿ ಸಭಾಭವನದಲ್ಲಿ ಯೋಜನೆ ಜಾರಿ ಕುರಿತು ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

401 ಕೋಟಿ ರೂ. ವೆಚ್ಚದ ಯೋಜನೆಗಾಗಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದು. ಯೋಜನೆಗೆ 0.889 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಸದ್ಯ ನಮ್ಮಲ್ಲಿ 0.480 ಟಿಎಂಸಿ ಅಡಿ ನೀರು ಲಭ್ಯತೆ ಇದೆ. ಉಳಿದ 0.409 ಟಿಎಂಸಿ ನೀರಿನ ಬಳಕೆಯ ಬಗ್ಗೆಯೂ ಪ್ರಸ್ತಾವನೆಯಲ್ಲಿ ವಿವರಿಸಲಾಗುವುದು ಎಂದು ತಿಳಿಸಿದರು.

ಅಲಮಟ್ಟಿ ಜಲಾಶಯದ ಹಿನ್ನೀರಿನ ಮುಗಳೊಳ್ಳಿ ಬಳಿಯ ಘಟಪ್ರಭಾ ನದಿ ಪಾತ್ರವನ್ನು ಯೋಜನೆ ಕೇಂದ್ರ ಎಂದು ಗುರುತಿಸಲಾಗಿದೆ. ಭಗವತಿ ಗ್ರಾಮದಲ್ಲಿ ದೊಡ್ಡದಾದ ಟ್ಯಾಂಕ್‌ ನಿರ್ಮಿಸಿ ಅಲ್ಲಿಂದ ನಾಲ್ಕು ವಿಭಾಗ ಮಾಡಿ ರೈತರ ಹೊಲಗಳಿಗೆ ನೀರು ಪೂರೈಸಲು ಯೋಜನೆ ಮಾಡಲಾಗಿದೆ ಎಂದರು.

ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಮಾತನಾಡಿ, ಹಿನ್ನೀರಿನ ಲಭ್ಯತೆಯ ವಿಚಾರ ಪ್ರಸ್ತಾಪಿಸಿ, ಈ ಭಾಗದ ಶಾಸಕರು ಹಾಗೂ ಪದಾಧಿಕಾರಿಗಳ ಸಹಕಾರದಿಂದ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ಪಡೆಯುವುದಾಗಿ ಹೇಳಿದರು.

Advertisement

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್.ಬಿ. ಕೊಣ್ಣೂರ, ಮುಖಂಡರಾದ ಟಿ.ವೈ. ಬೆಣ್ಣೂರ, ರಾಮಣ್ಣ ಸುನಗದ, ಡಿ.ಎಸ್‌. ಮೇಟಿ, ಎಂ.ಎಸ್‌. ಹೊಸಗೌಡರ, ಬಾಬಣ್ಣ ಪಾಟೀಲ, ರವಿ ಬೆಣ್ಣೂರ, ಎಂ.ಎಸ್‌. ವೈಜಾಪುರ, ಮನೋಹರ ಮಾಚಾ, ಎಲ್.ಎಸ್‌. ದಾಸಪ್ಪನ್ನವರ, ಸಿದ್ದಪ್ಪ ಹೂಗಾರ, ವಿಠಲ ಮಜ್ಜಗಿ, ಹನಮಂತ ಚಿಮ್ಮಲಗಿ, ಆರ್‌.ಎಸ್‌. ಹಳ್ಳೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next