ಹೊಸದಿಲ್ಲಿ: ಜೆಕ್ ಗಣ ರಾಜ್ಯದಲ್ಲಿ ನಡೆದ ಕ್ಲಾಡ್ನೊ ಆ್ಯತ್ಲೆಟಿಕ್ ಕೂಟದ ಪುರುಷರ 400 ಮೀ.ನಲ್ಲಿ ಭಾರತದ ಮೊಹಮ್ಮದ್ ಅನಾಸ್ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿ ಚಿನ್ನ ಜಯಿಸಿದರಲ್ಲದೇ ವಿಶ್ವ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದರು.
ವನಿತೆಯರ 200 ಮೀ.ನಲ್ಲಿ ಭರವಸೆಯ ಆ್ಯತ್ಲೀಟ್ ಹಿಮಾ ದಾಸ್ ಇನ್ನೊಂದು ಚಿನ್ನ ಗೆದ್ದು ಸಂಭ್ರಮಿ ಸಿದರು. 23.43 ಸೆ.ನಲ್ಲಿ ಗುರಿ ತಲುಪಿದ ಅವರು ಕಳೆದ ಎರಡು ವಾರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಚಿನ್ನ ಗೆದ್ದುಕೊಂಡರು. 23.10 ಸೆ.ನಲ್ಲಿ ಗುರಿ ತಲುಪಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮತ್ತೂಮ್ಮೆ ಚಿನ್ನ ಗೆದ್ದುಕೊಂಡಿದ್ದೇನೆ ಎಂದು ದಾಸ್ ಟ್ವೀಟ್ ಮಾಡಿದ್ದಾರೆ.
ಜಾವೆಲಿನ್‌ನಲ್ಲಿ ಕ್ಲೀನ್‌ಸ್ವೀಪ್
ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ವಿಪಿನ್ ಕಸನ, ಅಭಿಷೇಕ್ ಸಿಂಗ್ ಮತ್ತು ದೇವಿಂದರ್ ಸಿಂಗ್ ಕಾಂಗ್ ಅವರು ಅನುಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದು ಕ್ಲೀನ್‌ಸ್ವೀಪ್ ಸಾಧನೆಗೈದರು. ಶಾಟ್ಪುಟ್‌ನಲ್ಲಿ ತೇಜಿಂದರ್ ಪಾಲ್ ಸಿಂಗ್ ಶ್ರೇಷ್ಠ ನಿರ್ವಹಣೆ ನೀಡಿದರೂ ಕಂಚಿಗೆ ತೃಪ್ತಿಪಟ್ಟುಕೊಂಡರು.
ವನಿತೆಯರ 400 ಮೀ.ನಲ್ಲಿ ವಿ.ಕೆ. ವಿಸ್ಮಯಾ ಶ್ರೇಷ್ಠ ನಿರ್ವಹಣೆ ನೀಡಿ ಚಿನ್ನ ಗೆದ್ದರೆ ಗಾಯಕ್‌ವಾಡ್ ಕಂಚು ಗೆದ್ದರು.