Advertisement

ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ತೇಜಸ್ವಿ ಸೂರ್ಯ

02:53 PM Aug 10, 2021 | Team Udayavani |

ಬೆಂಗಳೂರು: ಸಂಸತ್ತಿನಲ್ಲಿ ಸೋಮವಾರ “ಠೇವಣಿ ವಿಮೆ ಸಾಲ ಖಾತರಿ (ತಿದ್ದುಪಡಿ) ಮಸೂದೆ-2021′ ಅನ್ನು ಅಂಗೀಕಾರ ಗೊಂಡ ಹಿನ್ನೆಲೆ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ನಲ್ಲಿ ಹೂಡಿಕೆ ಮಾಡಿ ಸಂಕಷ್ಟಕ್ಕೀಡಾಗಿರುವ ಎಲ್ಲ ಠೇವಣಿದಾರರಿಗೆ ಪರಿಹಾರ ದೊರಕಿದಂತಾಗಿದ್ದು ಈ ಹಿನ್ನೆಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಅವರು,ಗುರುರಾಘವೇಂದ್ರ ಬ್ಯಾಂಕ್‌ನ 40 ಸಾವಿರಕ್ಕೂ ಅಧಿಕ ಠೇವಣಿದಾರರಿಗೆ (ಹೆಚ್ಚಿನ ಪ್ರಮಾಣದಲ್ಲಿ ಹಿರಿಯ ನಾಗರಿಕರು, ಮಧ್ಯಮ ವರ್ಗ, ನಿವೃತ್ತನೌಕರರು) ಅನುಕೂಲವಾಗಲಿದ್ದು, ಸಾಮಾನ್ಯ ನಾಗರಿಕರ ಹಿತಾಸಕ್ತಿಗೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರವು 90 ದಿನಗಳ ಕಾಲಮಿತಿಯಲ್ಲಿ 5 ಲಕ್ಷದವರೆಗಿನ ಮೊತ್ತ ಪಡೆಯಲು ಅನುಕೂಲವಾಗುವಂತೆ ಮಸೂದೆ ಜಾರಿಗೆ ತಂದಿರುವುದು ಶ್ಲಾಘನೀಯ ಎಂದರು.

ಇದನ್ನೂ ಓದಿ:ದೀನದಯಾಳ್ ಉಪಾಧ್ಯಾಯ, ಸಾವರ್ಕರ್, ಶ್ಯಾಂಪ್ರಸಾದ ಮುಖರ್ಜಿ ಬ್ರಿಟಿಷರ ಏಜೆಂಟ್ ಗಳು:ಹರಿಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next