Advertisement

4,000 ಭಾರತೀಯ ಮಹಿಳೆಯರಿಂದ ‘ಮೆಹ್ರಮ್’ ಇಲ್ಲದೆ ಹಜ್ ಯಾತ್ರೆ: ಪ್ರಧಾನಿ ಮೋದಿ

04:58 PM Jul 30, 2023 | Team Udayavani |

ಹೊಸದಿಲ್ಲಿ: ‘ಈ ವರ್ಷ 4,000 ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ‘ಮೆಹ್ರಮ್’ ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ದೊಡ್ಡ ಪರಿವರ್ತನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

Advertisement

ತಮ್ಮ ಮಾಸಿಕ ಜನಪ್ರಿಯ ಮನ್ ಕಿ ಬಾತ್ ರೇಡಿಯೋ ಪ್ರಸಾರದಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಹಜ್ ಯಾತ್ರೆಯಿಂದ ಹಿಂದಿರುಗಿದ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯ ಪತ್ರಗಳನ್ನು ಸ್ವೀಕರಿಸಿರುವುದಾಗಿ ಹೇಳಿದರು.

ಕಳೆದ ಕೆಲ ವರ್ಷಗಳಿಂದ ತಮ್ಮ ಸರಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳೊಂದಿಗೆ ಹೆಚ್ಚು ಹೆಚ್ಚು ಜನರು ವಾರ್ಷಿಕ ಪವಿತ್ರ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದರು.

ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ‘ಮೆಹರಂ’ ಇಲ್ಲದೆ ಹಜ್ ಯಾತ್ರೆ ಮಾಡಲು ಅವಕಾಶವಿರಲಿಲ್ಲ. ಮನ್ ಕಿ ಬಾತ್ ಮೂಲಕ, ನಾನು ಸೌದಿ ಅರೇಬಿಯಾ ಸರಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಪ್ರಧಾನಿ ಹೇಳಿದರು.

ತ್ರಿವಳಿ ತಲಾಖ್ ನಿಷೇಧಿಸುವ ಕಾನೂನು ಸೇರಿದಂತೆ ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಮೋದಿ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಬಿಜೆಪಿಯ ಪ್ರತಿಪಾದನೆಯ ನಡುವೆ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

Advertisement

ಮಹ್ರಾಮ್ ಎಂಬುದು ಮಹಿಳೆಯ ಪುರುಷ ಸಂಬಂಧಿಯನ್ನು ವಿವರಿಸಲು ಬಳಸಲಾಗುವ ಅರೇಬಿಕ್ ಪದ. ಮದುವೆಯಾದ ಬಳಿಕ ಪತಿ ಮಹ್ರಾಮ್ ಆಗುತ್ತಾರೆ ಅಲ್ಲದೆ ಯಾವುದೇ ಪುರುಷ ಸಂಬಂಧಿ, ಹಿರಿಯ ಪುರುಷರ ನೆರವಿನೊಂದಿಗೆ ಯಾತ್ರೆ ಕೈಗೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next