Advertisement
ಜತೆಗೆ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮ ವತಿಯಿಂದ ಕೈಗೊಂಡಿದ್ದ ತ್ವರಿತಗೊಳಿಸಲ್ಪಟ್ಟ ನೀರಾವರಿ ಪ್ರಯೋಜನ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ತಲುಪದ ಕಾರಣ ರಾಜ್ಯವು ಕೇಂದ್ರದ 821.86 ಕೋಟಿ ರೂ. ಸಹಾಯಧನದಿಂದ ವಂಚಿತಗೊಂಡಿರುವುದನ್ನೂ ಸಿಎ ಜಿ ವರದಿ ಉಲ್ಲೇಖೀಸಿದೆ. ಮಂಗಳವಾರ ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡಿಸಿದ್ದು, ಇದೇ ಸಂಬಂಧ ಆರ್ಥಿಕ ಮತ್ತು ರಾಜಸ್ವ ವಲಯದ ಲೆಕ್ಕ ಪರಿಶೋಧನೆ ಮಹಾಲೇಖಪಾಲರಾದ ಅನೂಪ್ ಫ್ರಾನ್ಸಿಸ್ ಡುಂಗ್ ಡುಂಗ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಕಾಮಗಾರಿಗೆ 2008ರಲ್ಲಿ ಚಾಲನೆ ನೀಡಲಾಗಿತ್ತು. 800 ಮೆಗಾವ್ಯಾಟ್‌ನ ಎರಡು ಘಟಕಗಳ ನಿರ್ಮಾಣದ ಹೊಣೆ ಯನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ಗೆ ನೀಡ ಲಾಗಿತ್ತು. ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣ ಗೊಳಿಸದ ಹಿನ್ನೆಲೆಯಲ್ಲಿ ಯೋಜನಾ ಮೊತ್ತ 8,806 ಕೋಟಿ ರೂ.ಗಳಿಂದ 12,915 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದರಿಂದ 2014-15ರಿಂದ 2017-18ರ ಅವಧಿಯಲ್ಲಿ ಖಾಸಗಿ ವಿದ್ಯುತ್ ಉತ್ಪಾದಕರಿಂದ ಖರೀದಿಸಲಾದ 22,283 ದಶಲಕ್ಷ ಯೂನಿಟ್‌ಗಳಿಗೆ 2,517 ಕೋಟಿ ರೂ. ಹೆಚ್ಚಳವಾಗಿ ಭರಿಸಬೇಕಾಯಿತು.
Related Articles
ರಾಜ್ಯದ ವಿದ್ಯುತ್ ವಲಯಕ್ಕೆ ಸಂಬಂಧಿಸಿದಂತೆ 11 ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆರು ಉದ್ದಿಮೆಗಳು ಮಾತ್ರ ಲಾಭದಲ್ಲಿದ್ದು, ಉಳಿದ ಐದು ಉದ್ದಿಮೆಗಳು ನಷ್ಟದಲ್ಲಿವೆ. ಅದೇ ರೀತಿ ವಿದ್ಯುತ್ ವಲಯ ಹೊರತುಪಡಿಸಿದ 84 ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ ಕೇವಲ 45 ಉದ್ದಿಮೆಗಳು ಲಾಭದಲ್ಲಿದ್ದು, 25 ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Advertisement