Advertisement

400 ಕೆ.ವಿ. ವಿದ್ಯುತ್‌ ಪ್ರಸರಣ ಮಾರ್ಗ: ರೈತರ ಸಭೆ; ತೊಂದರೆಯಾಗದಂತೆ ಕಾಮಗಾರಿ: ಡಿಸಿ

02:12 AM Mar 16, 2022 | Team Udayavani |

ವಿಟ್ಲ: ಸರಕಾರಕ್ಕೆ ವಿದ್ಯುತ್‌ಪ್ರಸರಣ ಮಾರ್ಗಕ್ಕೆ ಜಾಗವನ್ನು ಮಾಡಿಕೊಡುವ ಜವಾಬ್ದಾರಿ ಇದೆ. ಪವರ್‌ ಡಿಪಾರ್ಟ್‌ಮೆಂಟ್‌ನಿಂದ ಜಿಲ್ಲಾಡಳಿತಕ್ಕೆ ಈ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಲಾಗಿದೆ. ನಾಗರಿಕರಿಗೆ ತೊಂದರೆಯಾಗದಂತೆ ಮಾಡುವ ಮತ್ತು ಜನರಿಗೆ ಸಮಸ್ಯೆಯಾದರೆ ಅದಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡುವ ಜವಾಬ್ದಾರಿ ಜಿಲ್ಲಾಧಿಕಾರಿಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

Advertisement

ಅವರು ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್‌ ಪ್ರಸರಣ ಮಾರ್ಗದ ವಿಚಾರದಲ್ಲಿ ನ್ಯಾಯಾಲಯದ ಮೊರೆಹೊಕ್ಕಿರುವ 69 ಮಂದಿ ರೈತರನ್ನು ಆಹ್ವಾನಿಸಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದರು.

ಸಂತ್ರಸ್ತ ರೈತ ರಾಜೀವ ಗೌಡ ಮಾತನಾಡಿ, ನಮ್ಮ ಜಾಗದಲ್ಲಿ ವಿದ್ಯುತ್‌ ಪ್ರಸರಣ ಮಾರ್ಗ ನಿರ್ಮಾಣ ಬೇಡವೆಂದೇ ಬೇಡಿಕೆ ಸಲ್ಲಿಸಿದ್ದೇವೆ. ಅದೇ ಪ್ರಕಾರ ನಾವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಬೇಡಿದ್ದೆವು. ನಮಗೆ ಪರಿಹಾರ ಬೇಡ. ನಮ್ಮ ಜಾಗದಲ್ಲಿ ಲೈನ್‌ ಹೋಗದಿರುವುದೇ ನಮಗೆ ಪರಿಹಾರ ಎಂದು ಪುನರುಚ್ಚರಿಸಿದರು.

ತತ್‌ಕ್ಷಣ ಕಾಮಗಾರಿ ಇಲ್ಲ
ಸಹಾಯಕ ಆಯುಕ್ತ ಮದನ ಮೋಹನ್‌ ಮಾತನಾಡಿ, ಹೈಕೋರ್ಟ್‌ಆದೇಶದ ಪ್ರಕಾರ ನಿಮ್ಮನ್ನು ಆಹ್ವಾನಿಸಿದ್ದೇವೆಯೇ ಹೊರತು ಚರ್ಚೆ ಮಾಡಿ ಇಲ್ಲೇ ಎಲ್ಲ ತೀರ್ಮಾನ ಮಾಡುವುದಕ್ಕಲ್ಲ; ಅದು ಅಸಾಧ್ಯ ಕೂಡ.
ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸುವ ಅವಕಾಶವಿದೆ. ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ತತ್‌ಕ್ಷಣ ಕಾಮಗಾರಿ ಆರಂಭಿಸುವುದಿಲ್ಲ. ಕಾನೂನಿನ ಪ್ರಕಾರ ಕಾಮಗಾರಿ ನಡೆಸಲಾಗುವುದು ಎಂದರು.

ವಿದ್ಯುತ್‌ ಮಾರ್ಗ ತಮ್ಮ ಜಮೀನುಗಳಲ್ಲಿ ಹೋಗಬಾರದೆಂದು ಮನವಿ ಮಾಡಿದ ರೈತರಿಗೆ ಪರಿಹಾರದ ಮೊತ್ತದ ಬಗ್ಗೆ ನೋಟಿಸು ಜಾರಿ ಮಾಡಿರುವುದಕ್ಕೇ ಸಭೆಯ ಆರಂಭದಲ್ಲಿ ಸಹಾಯಕ ಆಯುಕ್ತರಲ್ಲಿ ವಿರೋಧ ವ್ಯಕ್ತಪಡಿಸಲಾಯಿತು. ಬಳಿಕ ಕಡಿಮೆ ರೈತರು ಇರುವ ಕಾರಣಕ್ಕೆಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಾತುಕತೆ ಮುಂದುವರಿಯಿತು.

Advertisement

ರೈತರ ಆಕ್ಷೇಪ
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ರೈತರು ನೀಡಿದ ಮನವಿಯನ್ನು ಒಂದು ತಿಂಗಳಲ್ಲಿ ಪುರಸ್ಕಾರ ಮಾಡಬೇಕೆಂದು ತಿಳಿಸಿದ್ದರೂ ಯಾವೊಂದು ಸಭೆಯನ್ನೂ ಜಿಲ್ಲಾಡಳಿತ ನಡೆಸಿರಲಿಲ್ಲ. ಮಾ. 11ರಂದು ನೋಟಿಸು ಜಾರಿ ಮಾಡಿದ ಭೂಸ್ವಾ ಧೀನಾಧಿ ಕಾರಿ ಹಾಗೂ ಸಹಾಯಕ ಆಯುಕ್ತರು ಪರಿಹಾರದ ಮೌಲ್ಯ ನಿಗದಿಪಡಿಸುವ ವಿಚಾರದಲ್ಲಿ ಮಾ. 15ರಂದು ಸಭೆ ಕರೆದಿದ್ದರು. ಇದು ಸರಿಯಲ್ಲ ಎಂದು ಆಕ್ಷೇಪಿಸಿದ ರೈತರು ಪರಿಹಾರದ ವಿಚಾರವಾಗಿ ಮಾತನಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ಮನವಿ ಸಲ್ಲಿಸಿ, ನ್ಯಾಯಾಲಯದಲ್ಲಿಯೂ ಮನವಿ ಸಲ್ಲಿಸುವುದಾಗಿ ತಿಳಿಸಿ ಸಭೆಯಿಂದ ತೆರಳಿದರು. ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಸಂತ್ರಸ್ತ ರೈತರಾದ ರೋಹಿತಾಶ್ವ, ಶ್ಯಾಮ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next