Advertisement

ಕೋವಿಡ್ ಎಫೆಕ್ಟ್: ಮುಂಬಯಿ ಟು ದುಬೈ-360 ಸೀಟಿನ ವಿಮಾನದಲ್ಲಿ ಒಬ್ಬನೇ ಪ್ರಯಾಣಿಕ!

04:08 PM May 26, 2021 | Team Udayavani |

ಮುಂಬಯಿ: ಕೋವಿಡ್ 19 ಸೋಂಕು ಮತ್ತು ಲಾಕ್ ಡೌನ್ ಎಫೆಕ್ಟ್ ನಿಂದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ, ಇದರಿಂದ ಎಷ್ಟೆಲ್ಲಾ ನಷ್ಟ, ಅಪರೂಪದ ಘಟನೆಗಳು ನಡೆಯುತ್ತದೆ ಎಂಬುದಕ್ಕೆ ಈ ವರದಿಯೇ ಸಾಕ್ಷಿ…ಹೌದು ಇತ್ತೀಚೆಗೆ ಮುಂಬಯಿನಿಂದ ದುಬೈಗೆ ಹೊರಟಿದ್ದ 360 ಸೀಟುಗಳಿರುವ ಬೋಯಿಂಗ್ 777 ಎಮಿರೇಟ್ಸ್ ವಿಮಾನದಲ್ಲಿ ಒಬ್ಬರೇ ವ್ಯಕ್ತಿ ಪ್ರಯಾಣಿಸಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:ತನ್ನನ್ನು ಬಂಧಿಸಲು ಬಂದಿದ್ದಾರೆಂದು ತಿಳಿದು, ಕಾರಿನಲ್ಲಿ ಪಾರಾಗಲು ಯತ್ನಿಸಿದವ ಸೆರೆ

ಕೋವಿಡ್ 19 ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಯುಎಇ ಏಪ್ರಿಲ್ 25ರಿಂದ ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿತ್ತು. ಮುಂಬಯಿನಿಂದ ದುಬೈಗೆ ಎರಡೂವರೆ ಗಂಟೆಗಳ ಪ್ರಯಾಣ, ಅದರಲ್ಲೂ 18 ಸಾವಿರ ರೂಪಾಯಿ ಟಿಕೆಟ್ ದರದಲ್ಲಿ ಬೋಯಿಂಗ್ 777 ವಿಮಾನದಲ್ಲಿ ಒಬ್ಬರೇ ಪ್ರಯಾಣಿಕ ಪ್ರಯಾಣಿಸುವುದು ಒಂದು ಅಪರೂಪದ ಘಟನೆಯಾಗಿದೆ ಎಂದು ವರದಿ ವಿವರಿಸಿದೆ.

ಮೇ 19ರಂದು ಭಾವೇಶ್ ಜವೇರಿ (40ವರ್ಷ) ಅವರು ಮುಂಬಯಿನಿಂದ ದುಬೈಗೆ ಎರಡೂವರೆ ಗಂಟೆಗಳ ಕಾಲ ವಿಮಾನದಲ್ಲಿ ಒಬ್ಬರೇ ಪ್ರಯಾಣಿಸಿದ ವ್ಯಕ್ತಿಯಾಗಿದ್ದಾರೆ.

Advertisement

“ನಾನು ವಿಮಾನದೊಳಕ್ಕೆ ಪ್ರವೇಶಿಸಿದಾಗ ಗಗನಸಖಿ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು ಎಂದು ಜವೇರಿ ತಿಳಿಸಿದ್ದಾರೆ. ನಿಜಕ್ಕೂ ಹಣ ಎಷ್ಟೇ ಇದ್ದರೂ ಇಂತಹ ಅನುಭವ ಪಡೆಯಲು ಸಾಧ್ಯವಿಲ್ಲ” ಎಂದು ದುಬೈ ಕಚೇರಿಯ ಸ್ಟಾರ್ ಜೆಮ್ಸ್ ಗ್ರೂಪ್ ನ ಸಿಇಒ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತ ಅಭಿಪ್ರಾಯ ತಿಳಿಸಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಭಾವೇಶ್ ಅವರು ಸುಮಾರು 240 ಬಾರಿ ಮುಂಬೈ ಮತ್ತು ದುಬೈ ನಡುವೆ ವಿಮಾನದಲ್ಲಿ ಸಂಚರಿಸಿದ್ದರು. ಆದರೆ ವಿಮಾನದಲ್ಲಿ ಇಂತಹ ಅನುಭವವಾಗಿರುವುದು ಇದೇ ಮೊದಲ ಬಾರಿ ಎಂದು ತಮ್ಮ ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಒಬ್ಬರೇ ಪ್ರಯಾಣಿಕರಾಗಿದ್ದ ಭಾವೇಶ್ ಅವರ ಬಳಿ ಕಾಕ್ ಪಿಟ್ ನಲ್ಲಿದ್ದ ಪೈಲಟ್ ಬಂದು ಮಾತುಕತೆ ನಡೆಸಿದ್ದರು. ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡ್ ಆಗುವ ವೇಳೆ ಸೀಟ್ ಬೆಲ್ಟ್ ಧರಿಸುವ ಬಗ್ಗೆ ಸೂಚನೆ ನೀಡುವುದು ವಾಡಿಕೆ. ಆದರೆ ಈ ಬಾರಿ ಪ್ರತಿ ಬಾರಿಯ ಘೋಷಣೆಯ ವೇಳೆ ಭಾವೇಶ್ ಜವೇರಿ ಅವರ ಹೆಸರನ್ನು ಉಲ್ಲೇಖಿಸಿರುವುದು ವಿಶೇಷವಾಗಿತ್ತು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next