ಡೆಹ್ರಾಡೂನ್: ಕೈಲಾಸ ಮಾನಸ ಸರೋವರ ರಸ್ತೆಯನ್ನು ಮುಚ್ಚಿದ್ದರಿಂದ ಬುಂದಿ ಗ್ರಾಮದಲ್ಲಿ ಸಿಲುಕಿದ್ದ ಕನಿಷ್ಠ 40 ಯಾತ್ರಾರ್ಥಿಗಳನ್ನು ಉತ್ತರಾಖಂಡ ಸರ್ಕಾರ ಭಾನುವಾರ ರಕ್ಷಿಸಿದೆ. ಸಿಕ್ಕಿಬಿದ್ದ ಕೈಲಾಸ ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಬಳಸಿ ರಕ್ಷಿಸಿ ಧಾರ್ಚುಲಾಗೆ ಕರೆತರಲಾಯಿತು.
ಆಡಳಿತದ ಪ್ರಕಾರ, ಕೈಲಾಸ ಯಾತ್ರೆಯ ಮಾರ್ಗದಲ್ಲಿ ಗುಡ್ಡ ಕುಸಿತವಾದ ಕಾರಣ ರಸ್ತೆಯನ್ನು ಮುಚ್ಚಲಾಗಿದೆ.
“ಎಲ್ಲಾ ಯಾತ್ರಾರ್ಥಿಗಳನ್ನು ಎಂಟು ವಿಮಾನಗಳ ನಂತರ ಸುರಕ್ಷಿತವಾಗಿ ಧಾರ್ಚುಲಾಕ್ಕೆ ಕರೆದೊಯ್ಯಲಾಯಿತು. ಕೈಲಾಸ ಯಾತ್ರೆಯಿಂದ ಹಿಂದಿರುಗುತ್ತಿದ್ದ ವೇಳೆ ರಸ್ತೆ ಮುಚ್ಚಲಾಗಿತ್ತು, ಹಿಗಾಗಿ ಯಾತ್ರಾರ್ಥಿಗಳು ಬುಂಡಿಯಲ್ಲಿ ಸಿಲುಕಿಕೊಂಡಿದ್ದರು” ಎಂದು ಧಾರ್ಚುಲಾ ಡೆಪ್ಯುಟಿ ಕಲೆಕ್ಟರ್ ನಂದನ್ ಕುಮಾರ್ ತಿಳಿಸಿದರು.
ಇದನ್ನೂ ಓದಿ:ಪುಲ್ವಾಮಾದಲ್ಲಿ ಭಯೋತ್ಪಾದಕರ ಗುಂಡಿನ ದಾಳಿ: ಸಿಆರ್ ಪಿಎಆಫ್ ಯೋಧ ಹುತಾತ್ಮ
ಯಾತ್ರಾರ್ಥಿಗಳು ಸುಮಾರು 36 ಗಂಟೆಗಳ ಕಾಲ ಬುಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಕನ್ವರ್ ಯಾತ್ರೆ ಆರಂಭವಾಗಿದೆ.