Advertisement
ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ಪ್ಯಾಕೇಜ್ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆ ಇತ್ಯಾದಿಗಳಲ್ಲಿ ಶೇ. 40ಕ್ಕಿಂತಲೂ ಹೆಚ್ಚಿನ ಲಂಚಗುಳಿತನ ನಡೆಯುತ್ತಿರುವುದಾಗಿ ಆರೋಪಿಸಿದ್ದ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ಕಾಮಗಾರಿ ಆರಂಭಿಸುವ ಮೊದಲು ಶೇ. 25ರಿಂದ 30ರಷ್ಟು ಲಂಚವನ್ನು ಕೆಲವು ಜನಪ್ರತಿನಿಧಿಗಳಿಗೆ ನೀಡಬೇಕಿದೆ ಹಾಗೂ ಬಾಕಿ ಬಿಲ್‌ಗಳ ತೀರುವಳಿಗೆ ಶೇ. 5ರಿಂದ 6ರಷ್ಟು ಲಂಚ ಕೇಳಲಾಗುತ್ತಿದೆ ಎಂದು ಆಪಾದಿಸಿದ್ದರು.
Related Articles
Advertisement
ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರು ವುದು, ಅವುಗಳ ಗುಣಮಟ್ಟ, ಅನುಸೂಚಿ ದರಗಳ ಅನ್ವಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆಯೇ- ಇಲ್ಲವೇ, ಅನುಮೋದನೆ ನೀಡಿದ ಸಕ್ಷಮ ಪ್ರಾಧಿಕಾರಿ, ನಿರ್ವಹಿಸದ ಕಾಮಗಾರಿಗೂ ಬಿಲ್ ಪಾವತಿಸಿದೆಯೇ, ಹೆಚ್ಚುವರಿ ಬಿಲ್ ಪಾವತಿ ಮಾಡಲಾಗಿದೆಯೇ, ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವಂತೆ ಟೆಂಡರ್ ಪ್ರಕ್ರಿಯೆ ನಡೆದಿದೆಯೇ ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕು ಹಾಗೂ ಪರಿಶೀಲನೆ ವೇಳೆ ಕಂಡುಬರುವ ಇನ್ನಾéವುದೇ ಗಂಭೀರ ವಿಷಯಗಳನ್ನು ವಿಚಾರಣ ಆಯೋಗ ಪರಾಮರ್ಶಿಸುವಂತೆ ಕೋರಿದೆ.
ತನಿಖೆ ನಡೆಸಲು ಎಲ್ಲ ರೀತಿಯ ಅಧಿಕಾರವನ್ನು ಆಯೋಗಕ್ಕೆ ನೀಡಿದ್ದು, ವಿಚಾರಣೆಗೆ ಸಹಕರಿಸುವಂತೆ ಎಲ್ಲ ಇಲಾಖೆಗಳಿಗೂ ಸೂಚಿಸಲಾಗಿದೆ. ಸಿಬಂದಿ, ಸಾಮಗ್ರಿ, ವಾಹನ, ಕಚೇರಿ ಇತ್ಯಾದಿ ಅಗತ್ಯ ಸಲಕರಣೆಗಳನ್ನು ಒದಗಿಸಿ, ನಿಯಮಾನುಸಾರ ಭತ್ತೆ ಸೌಲಭ್ಯ ಕಲ್ಪಿಸುವಂತೆಯೂ ಆದೇಶಿಸಿದೆ. ಮೂರು ತಿಂಗಳುಗಳಲ್ಲಿ ವರದಿ ಸಲ್ಲಿಸುವಂತೆಯೂ ಅಪೇಕ್ಷಿಸಿದೆ.