Advertisement

ಸುಳ್ಯ ನಗರಕ್ಕೆ 40 ಲ.ರೂ. ಆದಾಯ ನಿರೀಕ್ಷೆ

02:04 AM Jun 29, 2020 | Sriram |

ಸುಳ್ಯ: ಸರಕಾರದ ಮಾರ್ಗ ಸೂಚಿ ಪ್ರಕಾರ ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಗೃಹ ಮತ್ತು ಗೃಹೇತರ ಕಟ್ಟಡಗಳಿಗೆ ಪ್ರತ್ಯೇಕ ಘನ ತ್ಯಾಜ್ಯ ಶುಲ್ಕ ವಿಧಿಸಲಾಗಿದ್ದು, ವಾರ್ಷಿಕ 40 ಲ.ರೂ. ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ.

Advertisement

ತ್ಯಾಜ್ಯ ವಿಲೇವಾರಿ ಸವಾಲಾಗಿರುವ ನಗರ ಪಂಚಾಯತ್‌ಗೆ ಈ ಆದಾಯವು ಪರಿಹಾರ ಮಾರ್ಗೋಪಾಯ ಕಂಡು ಕೊಳ್ಳಲು ಪೂರಕವಾಗುವ ನಿರೀಕ್ಷೆಯಿದೆ.

15 ವರ್ಷ ಹಿಂದಿನ ಸೂಚನೆ
ಆಯಾ ಸ್ಥಳೀಯಾಡಳಿತಗಳು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಶುಲ್ಕ ವಿಧಿಸುವಂತೆ 2006ರಲ್ಲೇ ರಾಜ್ಯ ಸರಕಾರ ಸುತ್ತೋಲೆ ಜಾರಿ ಮಾಡಿತ್ತು. ಆಗ ಆನ್‌ಲೈನ್‌ ವ್ಯವಸ್ಥೆ ಪರಿಪೂರ್ಣವಾಗಿರದ ಕಾರಣ ಶುಲ್ಕ ಸಂಗ್ರಹ ಆರಂಭಿಸಿರಲಿಲ್ಲ. ಸುಳ್ಯ ನ.ಪಂ. ಹೊರತು ಪಡಿಸಿ ಜಿಲ್ಲೆಯ ಬಹುತೇಕ ಸ್ಥಳೀಯಾ ಡಳಿತ ಸಂಸ್ಥೆಗಳಲ್ಲಿ ನಾಲ್ಕೈದು ವರ್ಷಗಳ ಹಿಂದೆಯೇ ಶುಲ್ಕ ಸಂಗ್ರಹ ಆರಂಭವಾಗಿದೆ.

ಈ ಬಾರಿ ಪ್ರತ್ಯೇಕ ಶುಲ್ಕ
2019ರ ಅಕ್ಟೋಬರ್‌ನಲ್ಲಿ ಸರಕಾರ ಪರಿಷ್ಕೃತ ದರದ ಕುರಿತು ಗಜೆಟ್‌ ನೋಟಿಫಿಕೇಶ್‌ ಹೊರಡಿಸಿದ್ದು, 2020ರ ಎ. 1ರಿಂದ ಜಾರಿಗೆ ತರಲಾಗಿದೆ. ನಗರದಲ್ಲಿ ಘನ ತ್ಯಾಜ್ಯಕ್ಕೆಂದೇ ಪ್ರತ್ಯೇಕ ಶುಲ್ಕ ಇರಲಿಲ್ಲ. 2014-15ರಿಂದ ಮನೆ ತೆರಿಗೆಯಲ್ಲಿ ಪ್ರತಿ ಕಟ್ಟಡದಿಂದ ತಿಂಗ ಳಿಗೆ ಕೇವಲ 10 ರೂ.ನಂತೆ ಸಂಗ್ರಹ ವಾಗುತ್ತಿತ್ತು. ಪ್ರತ್ಯೇಕ ಘನ ತ್ಯಾಜ್ಯ ಶುಲ್ಕ ಸಂಗ್ರಹ ಪದ್ಧತಿಯಲ್ಲಿ ಕಟ್ಟಡದ ಚದರಡಿ ಮಾದರಿಯಲ್ಲಿ ದರ ವಿಧಿಸಲಾಗುತ್ತದೆ. 100ರಿಂದ 500 ಚದರಡಿ ತನಕ -15 ರೂ., 500-1,000 ತನಕ 20 ರೂ., 1,000-2,000 ತನಕ 30 ರೂ., 2000 ಮೇಲ್ಪಟ್ಟು 45 ರೂ. ಶುಲ್ಕ ವಿಧಿಸ ಲಾಗುತ್ತದೆ. ಇದನ್ನು ಆಸ್ತಿ ತೆರಿಗೆ ಜತೆಗೆ ಪ್ರತಿ ವರ್ಷ ಪಾವತಿಸಬೇಕು.
ನಗರದಲ್ಲಿ 5,243 ಮನೆ ಹಾಗೂ 779 ವಾಣಿಜ್ಯ ಆಧಾರಿತ ಕಟ್ಟಡಗಳಿದ್ದು, ಮಾಸಿಕ 10 ರೂ. ಶುಲ್ಕ ಸಂಗ್ರಹದ ಸಂದರ್ಭ ವಾರ್ಷಿಕ 8ರಿಂದ 10 ಲ.ರೂ. ಸಂಗ್ರಹವಾಗುತಿತ್ತು¤. ಆದರೆ ಪ್ರತ್ಯೇಕ ಘನತ್ಯಾಜ್ಯ ಶುಲ್ಕ ಸಂಗ್ರಹದ ಪರಿಣಾಮ 40 ಲ.ರೂ. ಮೀರಿ ಸಂಗ್ರಹದ ನಿರೀಕ್ಷೆ ಯಿದೆ. ವಾಣಿಜ್ಯ ಆಧಾರಿತ ಕಟ್ಟಡ ಗಳಿಂದ 25 ಲ.ರೂ., ಗೃಹಾಧಾರಿತ ಕಟ್ಟಡಗಳಿಂದ 18 ಲ. ರೂ. ಸಂಗ್ರಹದ ಗುರಿಯಿರಿಸಲಾಗಿದೆ.

ಆದಾಯಕ್ಕಿಂತ ಖರ್ಚು ಹೆಚ್ಚು
ಪ್ರತಿ ವರ್ಷ ಪೌರ ಕಾರ್ಮಿಕರ ವೇತನ ಕ್ಕಾಗಿ 24 ಲ.ರೂ. ವ್ಯಯಿಸಲಾಗುತ್ತಿದೆ. ಅಲ್ಲದೆ ಡೀಸೆಲ್‌, ವಾಹನ, ಸಾಗಾಟ ಖರ್ಚು ಬೇರೆ. ಇದು ಸಂಗ್ರಹವಾಗುವ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚಾಗಿ ರುತ್ತದೆ. ಇದರಿಂದಾಗಿ ವರ್ಗ 1ರ ಫಂಡ್‌ನಿಂದ ಅನುದಾನ ಬಳಸಬೇಕಿತ್ತು. ಈ ಹೊಸ ತೆರಿಗೆ ನೀತಿಯಿಂದ ಆದಾಯ ಪ್ರಮಾಣ 40 ಲಕ್ಷಕ್ಕೆ ಏರಲಿದ್ದು, ಇದರಿಂದ ಬೇರೆ ಅನುದಾನ ಬಳಸುವ ಹೊರೆ ತಪ್ಪಲಿದೆ.

Advertisement

ಶುಲ್ಕ ಸಂಗ್ರಹಿಸದೆ ಸವಲತ್ತಿಲ್ಲ
ನಗರದಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ 2 ವರ್ಷಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಡೀ ನಗರದ ತ್ಯಾಜ್ಯವು ನ.ಪಂ. ಕಚೇರಿ ಮುಂಭಾಗದಲ್ಲಿ ಬಿದ್ದಿದೆ. ಘನ ತ್ಯಾಜ್ಯದ ವಿಲೇವಾರಿ ಖರ್ಚನ್ನು ಅದರಿಂದ ಸಂಗ್ರಹವಾಗುವ ಶುಲ್ಕದಿಂದಲೇ ಭರಿಸಬೇಕು ಎಂಬ ನಿಯಮವಿದೆ. ಪರಿಣಾಮ ಕಸ ವಿಲೇವಾರಿಗೆ ಬರ್ನಿಂಗ್‌ ಯಂತ್ರ ಸಹಿತ ಪೂರಕ ಸೌಲಭ್ಯಗಳಿಗೆ ಸರಕಾರಕ್ಕೆ ಪತ್ರ ಬರೆದರೂ, ಘನ ತ್ಯಾಜ್ಯ ಶುಲ್ಕ ವಸೂಲು ಮಾಡದ ಕಾರಣ ಆಡಳಿತಾತ್ಮಕ ಮಂಜೂರಾತಿ ಸಿಗುತ್ತಿರಲಿಲ್ಲ. ಹೊಸ ವ್ಯವಸ್ಥೆಯಿಂದ ಆ ಸಮಸ್ಯೆಗೂ ಪರಿಹಾರ ಸಿಗಲಿದೆ ಎನ್ನುತ್ತಾರೆ ನ.ಪಂ.ಅಧಿಕಾರಿಗಳು.

ಸುಧಾರಣೆಗೆ ಪೂರಕ
ಪ್ರತ್ಯೇಕ ಘನ ತ್ಯಾಜ್ಯ ಶುಲ್ಕ ಸಂಗ್ರಹದಿಂದ ನಗರದ ಕಸ, ತ್ಯಾಜ್ಯ ವಿಲೇವಾರಿಗೆ ಸಹಕಾರಿ ಆಗಲಿದೆ. ಬೇರೆ ಅನುದಾನ ಬಳಸದೆ, ಘನ ತ್ಯಾಜ್ಯ ಶುಲ್ಕದಿಂದಲೇ ಭರಿಸಬಹುದು. ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗಲಿದೆ.
-ಮತ್ತಡಿ , ಮುಖ್ಯಾಧಿಕಾರಿ
ಸುಳ್ಯ ನ.ಪಂ.

Advertisement

Udayavani is now on Telegram. Click here to join our channel and stay updated with the latest news.

Next