Advertisement
ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ದೀಪ ಬೆಳಗಿಸಿ ಆಶೀರ್ವಚನ ನೀಡಿ, ಹೊರಗಡೆ ದುಡಿದು ದಣಿದು ಮನೆಗೆ ಬಂದವರಿಗೆ ಮನಸ್ಸಿಗೆ ನೆಮ್ಮದಿ ಬೇಕು. ಅದು ಸಿಗಬೇಕಾದರೆ ಮನೆಯ ವಾತಾವರಣ ಚೆನ್ನಾಗಿರಬೇಕು. ಅದಕ್ಕೆ ಪೂರಕವಾಗಿ ಬೃಹತ್ ವಸತಿ ಸಮುಚ್ಚಯ ತಲೆ ಎತ್ತುತ್ತಿದೆ. ಇಂತಹ ಸಮುಚ್ಚಯಗಳು ಉಡುಪಿ ನಗರದ ಅಭಿವೃದ್ಧಿಗೂ ಸಹಕಾರಿಯಾಗಲಿವೆ ಎಂದು ಹೇಳಿದರು.
Related Articles
Advertisement
ಸಂತೋಷನಗರ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ ಅಲ್ಹಾಜ್ ಮೊಹಮ್ಮದ್ ಹನೀಫ್ ಮದನಿ ಅವರು, ಶೈಕ್ಷಣಿಕ, ಧಾರ್ಮಿಕ, ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡದಿಂದ ನಗರದ ಅಂದ ಇನ್ನಷ್ಟು ಹೆಚ್ಚಲಿದೆ ಎಂದರು.
ಸಮಾಜಕ್ಕೆ ಅನುಕೂಲವಾಗುವ ಕೊಡುಗೆಗಳನ್ನು ನೀಡಿದಾಗ ವ್ಯಕ್ತಿಯ ಹೆಸರು ಶಾಶ್ವತವಾಗಿರುತ್ತದೆ. ವೃತ್ತಿ ಧರ್ಮ ಪಾಲನೆಯೊಂದಿಗೆ ಕಾರ್ಯಪ್ರವೃತ್ತರಾದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ ಶುಭ ಹಾರೈಸಿದರು.
ಕ್ರೆಡಾೖ ಉಡುಪಿ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ, ಕಾಂಚನ ಹ್ಯುಂಡೈ ಎಂಡಿ ಪ್ರಸಾದರಾಜ್ ಕಾಂಚನ್, ಕಾಂಗ್ರೆಸ್‌ನ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಶುಭಾಶಂಸನೆಗೈದರು. ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್‌ನ ಧರ್ಮಗುರು ವಂ| ಡಾ| ರೋಕ್ ಡಿ’ಸೋಜಾ, ಮಣಿಪಾಲ ಕ್ರೈಸ್ಟ್ ಚರ್ಚ್‌ನ ಧರ್ಮಗುರು ವಂ| ರೋಮಿಯೋ ಫ್ರಾನ್ಸಿಸ್ ಲೂವಿಸ್, ಕಿದಿಯೂರ್ ಹೊಟೇಲ್ಸ್ ಪ್ರೈ.ಲಿ.ನ ಎಂಡಿ ಭುವನೇಂದ್ರ ಕಿದಿಯೂರು, ಉದ್ಯಮಿಗಳಾದ ರತ್ನಾಕರ ಶೆಟ್ಟಿ ಮತ್ತು ಸಾರಿಕಾ ಶೆಟ್ಟಿ, ಮೊಲ್ಲಿ ಡಯಾಸ್, ಜೇಸನ್ ಡಯಾಸ್, ಡಾ| ಲಾರಾ ಡಯಾಸ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರವರ್ತಕರಾದ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಸೈಮನ್ ಆರ್ಕಿಟೆಕ್‌ನ ಆರ್ಕಿಟೆಕ್ಟ್ ಪ್ರಕಾಶ್ ಸೈಮನ್ ಅವರು ಸಮುಚ್ಚಯದ ತಂತ್ರಜ್ಞಾನ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ಟೀವನ್ ಕುಲಾಸೋ ನಿರೂಪಿಸಿದರು.
ಲ್ಯಾಂಡ್ ಮಾರ್ಕ್
ಉಡುಪಿಯ ಹೃದಯ ಭಾಗದಲ್ಲಿ 40 ಅಂತಸ್ತಿನ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅತ್ಯಾಕರ್ಷಕವಾಗಿ ನಿರ್ಮಾಣಗೊಳ್ಳಲಿರುವ ಆರ್‌ಸಿಸಿ ಮಯೋನ್ ಶೀರ್ ವಾಲ್ ಸ್ಟ್ರಕ್ಚರ್ ಡಿಸೈನ್ ಫಾರ್ ಅರ್ಥ್ಕ್ವೇಕ್ ರೆಸಿಸ್ಟೆನ್ಸ್ ತಂತ್ರಜ್ಞಾನವನ್ನು ಹೊಂದಿರುವ ಈ ಸಮುಚ್ಚಯವು ಲ್ಯಾಂಡ್ ಮಾರ್ಕ್ ಆಗಿ ಮೂಡಿಬರಲಿದೆ. ಈ ಸಮುಚ್ಚಯವು ಎಲ್ಲ ವ್ಯವಸ್ಥೆಗಳಿಗೂ ಹೊಂದಿಕೊಂಡಿದ್ದು, ವಸತಿಗೆ ಯೋಗ್ಯವಾಗಿರಲಿದೆ. ಬುಕ್ಕಿಂಗ್ ಮತ್ತು ಮಾಹಿತಿಗೆ ವೆಬ್‌ಸೈಟ್: https:// www.mandavibuilders.com ಅನ್ನು ಸಂಪರ್ಕಿಸಬಹುದು. -ಗ್ಲೆನ್ ಡಯಾ ಸ್, ಮಾಂಡವಿ ಬಿಲ್ಡರ್ ಆ್ಯಂಡ್ ಡೆವಲಪರ್