ಬೆಂಗಳೂರು : ರಾಜ್ಯ ಬಿಜೆಪಿ ಸರಕಾರದ ೪೦% ಭ್ರಷ್ಟಾಚಾರದ ಕುರಿತಂತೆ ಕೊನೆಗೂ ಕಾಂಗ್ರೆಸ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದೆ.
ಇಷ್ಟು ದಿನಗಳ ಕಾಲ ಸದನದ ಹೊರಗೆ ಮಾತ್ರ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದ ಕಾಂಗ್ರೆಸ್ ಈಗ ವಿಧಾನಸಭೆಯಲ್ಲಿ ನಿಯಮಾವಳಿ ಅನುಸಾರ ಚರ್ಚೆಗೆ ಸಿದ್ಧವಾಗಿದೆ. ಈ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಕಳುಹಿಸಿದ್ದಾರೆ.
ಪಿಎಸ್ ಐ ಹಗರಣ ವಿಚಾರ ಚರ್ಚೆಗೆ ಬಂದಾಗ ಸಿದ್ದರಾಮಯ್ಯ ಈ ವಿಚಾರವನ್ನು ಸಾಂಕೇತಿಕವಾಗಿ ಪ್ರಸ್ತಾಪಿಸಿದ್ದರು. ಆದರೆ ಸರಕಾರದ ಎಲ್ಲ ಮುಖಗಳನ್ನು ಅನಾವರಣಗೊಳಿಸಲು ನಿಲುವಳಿ ಸೂಚನೆಯೇ ಮುಖ್ಯ ಎಂದು ಕಾಂಗ್ರೆಸ್ ಸದಸ್ಯರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಸ್ಪೀಕರ್ ಅವಗಾಹನೆಗೆ ನೋಟಿಸ್ ಕಳುಹಿಸಲಾಗಿದೆ.
40% ಕಮಿಷನ್ ವಿಚಾರದಲ್ಲಿ ಕೆಂಪಣ್ಣ ಬರೆದ ಪತ್ರ ಹೊರತುಪಡಿಸಿ ಇನ್ಯಾವುದೇ ದಾಖಲೆಯನ್ನು ಕಾಂಗ್ರೆಸ್ ಇದುವರೆಗೆ ನೀಡಿಲ್ಲ. ಹೀಗಾಗಿ ಸದನದಲ್ಲಿ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಮಡಿಕೇರಿ : ಹಸುಗಳ ಬಲಿ ಪಡೆಯುತ್ತಿದ್ದ ಹುಲಿ ಸೆರೆ, 10 ದಿನಗಳ ಕಾರ್ಯಾಚರಣೆ ಯಶಸ್ವಿ