ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು. ಇದರ ಕಾರ್ಯಭಾರವೆಲ್ಲ ಉಪಾಧ್ಯಕ್ಷ ರದ್ದೇ ಆಗಿರುತ್ತದೆ. ಎಲ್ಲವನ್ನು ಮುಖ್ಯಮಂತ್ರಿ ಯವರೇ ನಿಭಾಯಿಸಲು ಅಸಾಧ್ಯ. ಆದ್ದರಿಂದ ಉಪಾಧ್ಯಕ್ಷರ ಹುದ್ದೆಯೇ ಪ್ರಮುಖ.
Advertisement
ಭರ್ತಿ ನಾಲ್ಕು ವರ್ಷಉಡುಪಿ ಮೂಲದ ಆರತಿ ಕೃಷ್ಣ ಅವರು 2018ರ ಮೇ 31ರ ವರೆಗೆ ಉಪಾಧ್ಯಕ್ಷರಾಗಿದ್ದರು, ಅಲ್ಲಿಂದ ಈ ಹುದ್ದೆ ಖಾಲಿಯಿದೆ. ಅಂದರೆ ಈ ವರ್ಷದ ಮೇ 31ಕ್ಕೆ ಈ ಹುದ್ದೆಗೆ ಹೊಸಬರ ನೇಮಕವಾಗದೆ ಭರ್ತಿ ನಾಲ್ಕು ವರ್ಷಗಳಾಗುತ್ತವೆ.
ರಾಜ್ಯದಿಂದ ಉದ್ಯೋಗಕ್ಕಾಗಿ ತೆರಳಿರುವವರು, ಶಿಕ್ಷಣಕ್ಕಾಗಿ ಹೋಗಿರುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಏನಾದರೂ ಸಮಸ್ಯೆ ಎದುರಾದರೆ ತುರ್ತಾಗಿ ಸ್ಪಂದಿಸಿ, ನೆರವಾಗುವ ಉದ್ದೇಶದಿಂದ 2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಎನ್‌ಆರ್‌ಐ ಫೋರಂ ಆರಂಭಿಸಲಾಗಿತ್ತು. ಆದರೆ ಕೊರೊನಾ ಸಂಕಷ್ಟ, ಮೊನ್ನೆಯ ಉಕ್ರೇನ್ – ರಷ್ಯಾ ಯುದ್ಧ ಪರಿಸ್ಥಿತಿಯ ವೇಳೆ ಕ್ರಿಯಾಶೀಲವಾಗಿರಬೇಕಿದ್ದ ಎನ್‌ಆರ್‌ಐ ಫೋರಂ ನಿಷ್ಕ್ರಿಯವಾಗಿತ್ತು. ಮುಖ್ಯವಾಗಿ ಉಪಾಧ್ಯಕ್ಷರಿಲ್ಲದುದೇ ಇದಕ್ಕೆ ಕಾರಣ. ಸಂಪುಟ ದರ್ಜೆ ಸ್ಥಾನ
ಎನ್ನಾರೈ ಸಮಿತಿಯ ಉಪಾಧ್ಯಕ್ಷ ಹುದ್ದೆ ಸಂಪುಟ ದರ್ಜೆ ಸ್ಥಾನಮಾನದ್ದಾಗಿದ್ದು, 2008- 12ರ ವರೆಗೆ ಮಂಗಳೂರಿನ ಕ್ಯಾ| ಗಣೇಶ್ ಕಾರ್ಣಿಕ್, 2013-2016ರ ವರೆಗೆ ವಿ.ಸಿ. ಪ್ರಕಾಶ್ ಹಾಗೂ 2016 – 2018ರ ವರೆಗೆ ಆರತಿ ಕೃಷ್ಣ ಅವರು ಉಪಾಧ್ಯಕ್ಷರಾಗಿದ್ದರು.
Related Articles
ಫೋರಂನಲ್ಲಿ ಉಪಾಧ್ಯಕ್ಷರಿಲ್ಲದಿದ್ದರೆ ವಿದೇಶದಲ್ಲಿ ಏನೇ ಘಟನೆಗಳು ಆದಾಗಲೂ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಉಡುಪಿಯಿಂದ ಯಾವೆಲ್ಲ ದೇಶಕ್ಕೆ ಉದ್ಯೋಗ ಅಥವಾ ವಿದ್ಯಾರ್ಜನೆಗಾಗಿ ಯಾರೆಲ್ಲ ಹೋಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಇಲ್ಲಿಂದ ವಿದೇಶಕ್ಕೆ ಹೋಗು ವವರು ಡಿಸಿ ಕಚೇರಿಯಲ್ಲಿ ತಮ್ಮ ವಿಳಾಸ, ಫೋನ್ ನಂಬರ್ ಸಹಿತ ನೋಂದಣಿ ಮಾಡಿಸಿಕೊಂಡು ಹೋದರೆ ಪ್ರಯೋಜನವಾಗಲಿದೆ ಎನ್ನುವುದಾಗಿ ಅನಿವಾಸಿ ಭಾರತೀಯರಿಗೆ ನೆರವಾಗುತ್ತಿರುವ ಶಿವಾನಂದ ತಲ್ಲೂರು ತಿಳಿಸಿದ್ದಾರೆ.
Advertisement
ಸ್ಪಂದನೆಯೇ ಇಲ್ಲಎನ್ಆರ್ಐ ಸಮಿತಿಗೆ ಸಿಎಂ, ಉಪಾಧ್ಯಕ್ಷ ಹುದ್ದೆಯೊಂದಿಗೆ ಐಎಎಸ್ ಅಥವಾ ಕೆಎಎಸ್ ದರ್ಜೆಯ ಸದಸ್ಯ ಕಾರ್ಯದರ್ಶಿಗಳಿರುತ್ತಾರೆ. ಈಗ ಸದಸ್ಯ ಕಾರ್ಯದರ್ಶಿ ಮಾತ್ರ ಇರುವುದರಿಂದ ಯಾವುದೇ ರೀತಿಯ ಸ್ಪಂದನೆ ಸಾಧ್ಯವಾಗುತ್ತಿಲ್ಲ. ಉಪಾಧ್ಯಕ್ಷರಿದ್ದರೆ ಸರಕಾರ, ರಾಯಭಾರ ಕಚೇರಿಯನ್ನೆಲ್ಲ ತ್ವರಿತವಾಗಿ ಸಂಪರ್ಕಿಸಿ, ನೆರವಾಗಲು ಸಾಧ್ಯವಾಗುತ್ತದೆ. ಎನ್‌ಆರ್‌ಐ ಫೋರಂಗೆ 4 ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ. ಅದಕ್ಕಿಂತ ಹಿಂದೆ ನಾನು ಉಪಾಧ್ಯಕ್ಷನಾಗಿದ್ದೆ. ಈಗಲೂ ಅನೇಕ ಮಂದಿ ನಾನೇ ಆ ಹುದ್ದೆಯಲ್ಲಿದ್ದೇನೆಂದು ಕರೆ ಮಾಡಿ, ಸಹಕಾರ ಕೋರುತ್ತಾರೆ. ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಸಂದಿಗ್ಧ ಪರಿಸ್ಥಿತಿ ಬಂದಾಗ ನೇಮಕಾತಿ ಮಾಡುವ ಬದಲು, ಅದಕ್ಕೆ ಮೊದಲೇ ಸಿದ್ಧರಾಗುವುದು ಉತ್ತಮ. ಇನ್ನಾದರೂ ಹೊಸಬರ ನೇಮಕ ಆಗಲಿ.
– ಆರತಿ ಕೃಷ್ಣ, ಎನ್‌ಆರ್‌ಐ ಫೋರಂ
ಹಿಂದಿನ ಉಪಾಧ್ಯಕ್ಷೆ ಇದು ಬಹಳ ಪ್ರಮುಖವಾದ ಹುದ್ದೆ. ಕೂಡಲೇ ಅರ್ಹರಾದವರನ್ನು ನೇಮಕ ಮಾಡಬೇಕು ಎನ್ನುವುದಾಗಿ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ. ಅವರನ್ನು ಭೇಟಿಯಾದಾಗ ಉಪಾಧ್ಯಕ್ಷರ ನೇಮಕ ಕುರಿತಂತೆ ಗಮನಕ್ಕೆ ತರಲಾಗುವುದು.
– ಕ್ಯಾ| ಗಣೇಶ್ ಕಾರ್ಣಿಕ್,
ಎನ್‌ಆರ್‌ಐ ಫೋರಂ ಮೊದಲ ಉಪಾಧ್ಯಕ್ಷ – ಪ್ರಶಾಂತ್ ಪಾದೆ