Advertisement

4 ಕಳ್ಳತನ ಪ್ರಕರಣ; ಇಬ್ಬರ ಬಂಧನ,6 ಕೆಜಿ ಬೆಳ್ಳಿ,940 ಗ್ರಾಂ ಚಿನ್ನ ವಶ

05:31 PM Oct 29, 2018 | Team Udayavani |

ಬೆಂಗಳೂರು: ನಗರದ ಬನಶಂಕರಿ ಪೋಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕುಖ್ಯಾತ ಕಳ್ಳರನ್ನು ಸೋಮವಾರ ಬಂಧಿಸಿದ್ದಾರೆ. 

Advertisement

 ಬಂಧಿತ ಆರೋಪಿಗಳನ್ನು ಸಯ್ಯದ್ ಇಮ್ರಾನ್ ಅಲಿಯಾಸ್ ಕಾಲು (22 ವರ್ಷ) ಮತ್ತು ವಾಸಿಂ ಅಕ್ರಮ್ ಅಲಿಯಾಸ್ ( 26 ವರ್ಷ) ಎಂದು ಗುರುತಿಸಲಾಗಿದೆ. 

ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು, ಬಸವನಗುಡಿ ಠಾಣಾ ವ್ಯಾಪ್ತಿಯ ಒಂದು ರಾತ್ರಿ ವೇಳೆ ಕಳವು ಪ್ರಕರಣ, ಹಾಗು ಜೆ.ಪಿ.ನಗರ ಠಾಣೆಯ ಒಂದು ಹಗಲು ಕಳ್ಳತನ ಪ್ರಕರಣಕ್ಕೆ ಸೇರಿದಂತೆ ಒಟ್ಟು 4 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು 30 ಲಕ್ಷ ಬೆಲೆ ಬಾಳುವ 940 ತೂಕದ ಚಿನ್ನಾಭರಣಗಳು ಮತ್ತು 6.5 ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ . 

 ಜಯನಗರ ಉಪ  ವಿಭಾಗದ ಸಹಾಯಕ  ಪೊಲೀಸ್ ಕಮಿಷನರ್ ಹೆಚ್. ಶ್ರೀನಿವಾಸ  ಅವರ ನೇತೃತ್ವದ ವಿಶೇಷ ತಂಡ ಬನಶಂಕರಿ ಪೊಲೀಸ್  ಇನ್ಸ್ಪೆಕ್ಟರ್ ಹೆಚ್.ಪಿ. ಪುಟ್ಟು ಸ್ವಾಮಿ, ಪಿಎಸೈ ಅರ್ಜುನ್ ಸಿ ಅರ್ , ಗಿರಿಮಲ್ಲಪ್ಪ, ಸಿಬ್ಬಂದಿಗಳಾದ ಎ ಎಸ್ ಐ ಚಿಕ್ಕಣ್ಣ, ವೆಂಕಟೇಶ , ಮತ್ತಾ ನಾಯ್ಕ , ಪರಮೇಶ್ವರ , ಶ್ರೀಮಂತ ಖೇಮು ರಾಥೋಡ್, ತ್ಹೌಸಿಫ್ ಅಹಮದ್, ವಸಂತ್ ಕುಮಾರ್, ಶರತ್ ಕುಮಾರ್, ಸೋನಿಯಾ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಮತ್ತು ಅಪರ ಪೊಲೀಸ್ ಆಯುಕ್ತರು- ಪಶ್ಚಿಮ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ .  

Advertisement

Udayavani is now on Telegram. Click here to join our channel and stay updated with the latest news.

Next