Advertisement
ಸಮುದ್ರ ಮಟ್ಟಕ್ಕಿಂತ ಸುಮಾರು 22,000 ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್‌ನಲ್ಲಿ, ಸಾಮಾನ್ಯವಾಗಿ ಪಾಕಿಸ್ತಾನ ಸೈನಿಕರೂ ಅವರ ಗಡಿಯೊಳಗೆ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. 1984ರಿಂದ ಇಲ್ಲಿಯವರೆಗೆ ಅಲ್ಲಿ ಹಲವಾರು ಬಾರಿ ಹಿಮಪಾತ ಸಂಭವಿಸಿದ್ದು, ಭಾರತ ಮತ್ತು ಪಾಕಿಸ್ತಾನಕ್ಕೆ ಸೇರಿದ ನೂರಾರು ಯೋಧರು ಇಲ್ಲಿ ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಸತ್ತಿದ್ದಕ್ಕಿಂತ ಹೆಚ್ಚಾಗಿ ಹಿಮಪಾತದಿಂದಲೇ ಇಲ್ಲಿ ಸೈನಿಕರು ಸಾವನ್ನಪ್ಪಿರುವುದು ಈ ಪ್ರದೇಶದ ಸೂಕ್ಷ್ಮತೆಯನ್ನು ಸಾರಿ ಹೇಳಿದೆ.
2016ರ ಫೆಬ್ರವರಿ 3ರಂದು, ಸಿಯಾಚಿನ್ ಪ್ರಾಂತ್ಯದಲ್ಲಿರುವ, ಸಮುದ್ರ ಮಟ್ಟಕ್ಕಿಂತ ಸುಮಾರು 20,500 ಅಡಿಗಳಷ್ಟು ಎತ್ತರದಲ್ಲಿರುವ ಸೋನಂ ಚೆಕ್‌ಪೋಸ್ಟ್ ಆಸುಪಾಸಿನಲ್ಲೂ ಇಂಥದ್ದೇ ಹಿಮಪಾತ ಸಂಭವಿಸಿತ್ತು. ಆ ಘಟನೆಯಲ್ಲಿ, ಕರ್ನಾಟಕದ ಯೋಧ ಲ್ಯಾನ್ಸರ್ ಹನುಮಂತಪ್ಪ ಕೊಪ್ಪದ್ ಸೇರಿ 10 ಭಾರತೀಯ ಸೈನಿಕರು 25 ಅಡಿಗಳಷ್ಟು ಹಿಮದ ಅಡಿಯಲ್ಲಿ ಸಿಲುಕಿದ್ದರು. ಕಾರ್ಯಾಚರಣೆ ಮೂಲಕ ಅವರನ್ನು ರಕ್ಷಿಸಲಾಗಿತ್ತು. ಆದರೆ, ದೆಹಲಿಯಲ್ಲಿ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದರು.