Advertisement

ವರ್ಮಾ ನಿವಾಸದ ಮುಂದಿದ್ದ ನಾಲ್ವರು ಗುಪ್ತಚರ ಅಧಿಕಾರಿಗಳು: ಐಬಿ

03:28 PM Oct 25, 2018 | Team Udayavani |

ಹೊಸದಿಲ್ಲಿ : ಸಿಬಿಐ ನಿರ್ದೇಶಕರ ಆಲೋಕ್‌ ವರ್ಮಾ ಅವರ ನಿವಾಸದ ಮುಂದೆ ಠಳಾಯಿಸುತ್ತಿದ್ದ ಕಾರಣಕ್ಕೆ ವರ್ಮಾ ಅವರ ಭದ್ರತಾ ಅಧಿಕಾರಿಗಳು ವಶಕ್ಕೆ  ಪಡೆದುಕೊಂಡಿರುವ ನಾಲ್ವರು ಶಂಕಿತರು ತನ್ನದೇ ಅಧಿಕಾರಿಗಳು ಎಂದು ಗುಪ್ತಚರ ಇಲಾಖೆ ಒಪ್ಪಿಕೊಂಡಿದೆ. 

Advertisement

ತನ್ನ ನಾಲ್ವರು ಅಧಿಕಾರಿಗಳನ್ನು ತಾನು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲಿಗಾಗಿ ನಿಯೋಜಿಸಿದ್ದೆ ಎಂದು ಗುಪ್ತಚರ ದಳ (ಐಬಿ) ಹೇಳಿದೆ. 

ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಶಾಂತಿ, ಶಿಸ್ತನ್ನು ಬಾಧಿಸಬಹುದಾದ ಪ್ರದೇಶಗಳಲ್ಲಿನ ಮಾಹಿತಿಯನ್ನು ಕಲೆ ಹಾಕುವ ಬೇಹು ಕಾರ್ಯಕ್ಕಾಗಿ ತಾನು ತನ್ನ ನಾಲ್ಕು ಅಧಿಕಾರಿಗಳನ್ನು ಸಿಬಿಐ ನಿರ್ದೇಶಕ ಆಲೋಕ್‌ ವರ್ಮಾ ನಿವಾಸದ ಮುಂದಿನ ತಾಣದಲ್ಲಿ ನಿಯೋಜಸಿದ್ದೆ ಎಂದು ಐಬಿ ಹೇಳಿದೆ. 

ತನ್ನ ಈ ನಿಯೋಜನೆಯು ಮಾಮೂಲಿಯ ಉಪಕ್ರಮವಾಗಿದ್ದು ಇದರಲ್ಲಿ ಯಾವುದೇ ಅನ್ಯ ಉದ್ದೇಶಗಳಿಲ್ಲ ಎಂದು ಐಬಿ ಹೇಳಿದೆ.  

Advertisement

Udayavani is now on Telegram. Click here to join our channel and stay updated with the latest news.

Next