ಚಂಡಿಗಢ: ಮೂರು ಅಂತಸ್ತಿನ ಅಕ್ಕಿ ಗಿರಣಿಯ ಕಟ್ಟಡ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟು 20 ಮಂದಿ ಗಾಯಗೊಂಡಿರುವ ಘಟನೆ ಹರ್ಯಾಣದ ಕರ್ನಾಲ್ ಜೆಲ್ಲೆಯ ತಾರೋರಿಯಲ್ಲಿ
ಸೋಮವಾರ-ಮಂಗಳವಾರದ ಮಧ್ಯರಾತ್ರಿಯಲ್ಲಿ ನಡೆದಿರುವುದು ವರದಿಯಾಗಿದೆ.
ಹರ್ಯಾಣದ ಕರ್ನಾಲ್ ಜೆಲ್ಲೆಯ ತಾರೋರಿಯಲ್ಲಿರುವ ಮೂರು ಅಂತಸ್ತಿನ ಶಿವಶಕ್ತಿ ರೈಸ್ ಮಿಲ್ ಕುಸಿದು ಬಿದ್ದಿರುವ ಕಟ್ಟಡ. ಮಿಲ್ ನಲ್ಲಿ ರಾತ್ರಿ ಪಾಳಿಯ ಕೆಲಸವನ್ನು ಮಾಡಿ 100 ಹೆಚ್ಚಿನ ಕಾರ್ಮಿಕರು ಮಲಗಿದ್ದರು. ಈ ವೇಳೆ ಕಟ್ಟಡ ಕುಸಿದು ಬಿದ್ದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Sand Mining: ಮರಳು ಮಾಫಿಯಾ ಪರಿಶೀಲಿಸಲು ತೆರಳಿದ್ದ ಅಧಿಕಾರಿಗಳನ್ನೇ ಅಟ್ಟಾಡಿಸಿ ಹಲ್ಲೆಗೈದರು
ಕಟ್ಟಡ ಕುಸಿದ ಪರಿಣಾಮ 4 ಜನರು ಮೃತಪಟ್ಟಿದ್ದು, 20 ಮಂದಿಗೆ ಗಾಯವಾಗಿದೆ ಎನ್ನಲಾಗಿದೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಇದುವರೆಗೆ 100 ಮಂದಿಯನ್ನು ರಕ್ಷಿಸಲಾಗಿದ್ದು, ಅವಶೇಷದಡಿ ಇನ್ನು ಹಲವರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಕಟ್ಟಡದಲ್ಲಿ ಕೆಲ ದೋಷಗಳು ಇರುವುದು ಕಂಡು ಬಂದಿದೆ.ಇದರ ಬಗ್ಗೆ ತನಿಖೆ ನಡೆಸಲು
ಸಮಿತಿಯೊಂದನ್ನು ರಚಿಸಲಾಗುವುದು.ಕಟ್ಟಡ ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಂದು ಕರ್ನಾಲ್ ನ ಜಿಲ್ಲಾಧಿಕಾರಿ ಅನೀಶ್ ಯಾದವ್ ಹೇಳಿದ್ದಾರೆ.