Advertisement

ಫ‌ಸ್ಟ್‌ ಲುಕ್‌ ಟೀಸರ್‌ನಲ್ಲಿ 4 ಎನ್‌ 6; ಮರ್ಡರ್‌ ಮಿಸ್ಟ್ರಿಯಲ್ಲಿ ರಚನಾ ಇಂದರ್

06:14 PM Feb 26, 2024 | Team Udayavani |

“4 ಎನ್‌ 6′ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಪರ್ಪಲ್‌ ಪ್ಯಾಚ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಸಾಯಿಪ್ರೀತಿ ಎನ್‌. ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮರ್ಡರ್‌ ಮಿಸ್ಟ್ರಿ ಜಾನರ್‌ನ ಈ ಚಿತ್ರದಲ್ಲಿ ರಚನಾ ಇಂದರ್‌, ಭವಾನಿ ಪ್ರಕಾಶ್‌ ಹಾಗೂ ನವೀನ್‌ ಕುಮಾರ್‌, ಆದ್ಯಶೇಖರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

ಚಿತ್ರಕ್ಕೆ ದರ್ಶನ್‌ ಶ್ರೀನಿವಾಸ್‌ ನಿರ್ದೇಶನವಿದೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ರಚನಾ ಇಂದರ್‌ ಇದೇ ಮೊದಲ ಬಾರಿಗೆ ಫಾರೆನ್ಸಿಕ್‌ ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ದರ್ಶನ್‌ ಮಾತನಾಡಿ, “ನನ್ನ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಫೋರೆನ್ಸಿಕ್‌ ವರದಿ ಮುಖ್ಯವಾಗುತ್ತದೆ. 4 ಪ್ರಮುಖ ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಕಥೆ ಮಾಡುವಾಗ ಫೋರೆನ್ಸಿಕ್‌ ತಜ್ಞರ ಸಲಹೆ ತೆಗೆದುಕೊಂಡೆ. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನ ಚಿತ್ರೀಕರಿಸಲಾಗಿದ್ದು, ಈಗಾಗಲೇ ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ’ ಎಂದರು.

ನಿರ್ಮಾಪಕಿ ಸಾಯಿಪ್ರೀತಿ,  ಕಾರ್ಯಕಾರಿ ನಿರ್ಮಾಪಕರಾದ ಕರಣ್‌ ಸಿಂಗ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ನಾಯಕಿ ರಚನಾ ಇಂದರ್‌ ಮಾತನಾಡಿ, “ಮೊದಲ ಬಾರಿಗೆ ಇಂತಹ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಮಾತಿಲ್ಲ’ ಎಂದರು.

ನಟಿ ಭವಾನಿ ಪ್ರಕಾಶ್‌, ನಾಯಕ ನವೀನ್‌ ಕುಮಾರ್‌ ಕೂಡಾ ತಮ್ಮ ಪಾತ್ರ, ಚಿತ್ರೀಕರಣ ಅನುಭವ ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next