ಲಕ್ನೋ: ಕಪಿಗಳ ಗುಂಪು ನಾಲ್ಕು ತಿಂಗಳ ಹಸುಳೆಯನ್ನು ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಎಸೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವಿಚಿತ್ರ ಕೆಲಸ ಮಾಡುತ್ತಿದ್ದಾನೆ ಈ ಯುವಕ: 1 ಗಂಟೆಗೆ 7,000 ರೂ. ಸಂಬಳ!
ಘಟನೆ ಕುರಿತು ವರದಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಲಾಗಿದೆ ಎಂದು ಬರೇಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿರುವುದಾಗಿ ವರದಿಯಾಗಿದೆ.
ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25ವರ್ಷ) ಮತ್ತು ಪತ್ನಿ ತಮ್ಮ ಮೂರು ಅಂತಸ್ತಿನ ಮನೆಯ ಮಹಡಿ ಮೇಲೆ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಾಲ್ಕು ತಿಂಗಳ ಗಂಡು ಮಗುವನ್ನು ಟೆರೇಸ್ ಮೇಲೆ ಮಲಗಿಸಿದ್ದರು. ಏಕಾಏಕಿ ಮಂಗಗಳ ಗುಂಪು ಮಗುವನ್ನು ಸುತ್ತುವರೆದಿತ್ತು. ನಿರ್ದೇಶ್ ಮತ್ತು ಪತ್ನಿ ಮಂಗಗಳನ್ನು ಓಡಿಸಲು ಪ್ರಯತ್ನಿಸಿದ್ದರೂ ಕೂಡಾ, ಒಂದು ಮಂಗ ಮಗುವನ್ನು ಎತ್ತಿಕೊಂಡು ಮೇಲಿಂದ ಕೆಳಕ್ಕೆ ಎಸೆದು ಬಿಟ್ಟಿರುವುದಾಗಿ ವಿವರಿಸಿದೆ.
ಮೂರು ಅಂತಸ್ತಿನ ಕೆಳಗಿಂದ ಮಗುವನ್ನು ಎಸೆದ ಪರಿಣಾಮ, ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಕಪಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.