Advertisement

ಬ್ಯಾಕ್ಟೀರಿಯಾ ನಿರ್ಮೂಲನೆಗೆ  4 ನಿಮಿಷಗಳ ಬ್ರಷಿಂಗ್‌ ಬೇಕು!

10:54 PM Oct 28, 2021 | Team Udayavani |

ಪ್ರತೀ ದಿನ ಬೆಳಗ್ಗೆ ನಮ್ಮ ಹಲ್ಲುಗಳನ್ನು ಟೂತ್‌ಬ್ರಷ್‌ ನಿಂದ ಸುಮಾರು 2 ನಿಮಿಷಗಳ ಕಾಲ ಉಜ್ಜಿ ಶುಚಿ ಗೊಳಿಸಬೇಕು ಎಂಬ ಸಲಹೆಯನ್ನು ಚಿಕ್ಕವರಿದ್ದಾಗಿನಿಂದ ಕೇಳಿರುತ್ತೇವೆ. ಆದರೆ, ಇತ್ತೀಚಿನ ಅಧ್ಯ­ಯನದ ಪ್ರಕಾರ, 2 ನಿಮಿಷಗಳ ಬ್ರಷಿಂಗ್‌ ಸಾಕಾಗಿದೆಯಾದರೂ ಹಲ್ಲುಗಳು ಪೂರ್ತಿ ಸ್ವಚ್ಛವಾಗಲು, ದೀರ್ಘ‌ವಾಗಿ ಬಾಳಿಕೆ ಬರಲು ನಾಲ್ಕು ನಿಮಿಷಗಳವರೆಗೆ ಸ್ವಚ್ಛಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Advertisement

ಉಪಯೋಗ: ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ, ಫ‌ಂಗೈ ಹಾಗೂ ವೈರಾಣುಗಳು ತಮ್ಮದೇ ಆದ ಪ್ರತ್ಯೇಕ ಸ್ತರಗಳಲ್ಲಿ ಒಟ್ಟಿಗೆ ಸಹಜೀವನ ನಡೆಸುತ್ತಿರುತ್ತವೆ. ಈ ಬಡಾವಣೆ ಸ್ವರೂಪದ ಸಹಜೀವನವನ್ನು ಬಯೋಫಿಲ್ಮ್ಸ್ ಎಂದು ಕರೆಯಲಾಗುತ್ತದೆ. ಈ ಬಯೋಫಿಲ್ಮ್ ಗಳು ಹೆಚ್ಚು ಅಂಟುವಿಕೆಯ ಗುಣವನ್ನು ಹೊಂದಿದೆ. ಹಾಗಾಗಿ ಕೇವಲ 2 ನಿಮಿಷಗಳ ಬ್ರಷಿಂಗ್‌ನಿಂದ ಇದು ಸುಲಭವಾಗಿ ತೊಲಗಿ­ಹೋಗುವುದಿಲ್ಲ.

ಇನ್ನು ಬ್ರಷ್‌ ತಾಗದ ಕಡೆಗಳಲ್ಲಿ ಇದು ಹಲ್ಲುಗಳಿಗೆ ತೆಳುಪರದೆಯ ರೂಪದಲ್ಲಿ ಅಂಟಿಕೊಂಡೇ ಇರುತ್ತದೆ. ನಾಲ್ಕು ನಿಮಿಷಗಳ ಬ್ರಷಿಂಗ್‌ ಮಾಡಿದರಷ್ಟೇ ಇದು ಸಂಪೂರ್ಣವಾಗಿ ತೊಲಗಿಹೋಗುತ್ತದೆ. ಹಲ್ಲುಗಳ ಎಲ್ಲ ಭಾಗಗಳಿಗೂ ಬ್ರಷ್‌ ತಲುಪುವುದನ್ನು ಖಾತ್ರಿ ಪಡಿಸಿಕೊಂಡು ಉಜ್ಜಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಬಯೋಫಿಲ್ಮ್ ತೊಲಗದೇ ಉಳಿದರೆ ಅದರಿಂದ ಮುಂದೆ ಹುಳುಕು ಹಲ್ಲು ಇತ್ಯಾದಿ ಸಮಸ್ಯೆಗಳಿಗೆ ಕಾರಣ­ವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next