Advertisement

12 ದಿನದ ಪುಟ್ಟ ಕಂದಮ್ಮ, ತಾಯಿ ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ

04:30 AM Jan 23, 2019 | Sharanya Alva |

ಭೋಪಾಲ್: 12 ದಿನಗಳ ಪುಟ್ಟ ಕಂದಮ್ಮ, ತಾಯಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ಸಮೀಪದ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿಯ ದೇಹವೂ ದೊರಕಿದ್ದು, ಆತನ ದೈಹಿಕ ಸ್ಥಿತಿ ಗಂಭೀರವಾಗಿರುವುದಾಗಿ ವರದಿ ತಿಳಿಸಿದೆ.

Advertisement

ನಾಲ್ವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಭೋಪಾಲ್ ನಿಂದ 43 ಕಿಲೋ ಮೀಟರ್ ದೂರದಲ್ಲಿರುವ ರೈಸೆನ್ ನಲ್ಲಿರುವ ಮನೆಯಲ್ಲಿ ಮಹಿಳೆಯ ತಾಯಿ ಮತ್ತು ಆಕೆಯ ಸಹೋದರ ನ ಶವ ಸೇರಿದಂತೆ ನಾಲ್ಕು ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಪತಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವಿವರಿಸಿರುವ ಪೊಲೀಸರು, ಆತನ ಪತ್ನಿ ಹಾಗೂ 12 ದಿನದ ಮಗು, 11 ವರ್ಷದ ಆತನ ಬಾವ, ಅತ್ತೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಪಿ ಸಿಂಗ್ ಎ ಎನ್ ಐ ನ್ಯೂಸ್ ಸಂಸ್ಥೆಗೆ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next