Advertisement

ಪೊಲೀಸರು-ನಕ್ಸಲರ ನಡುವೆ ಗುಂಡಿನ ಕಾಳಗ: ಸಬ್ ಇನ್ಸ್ ಪೆಕ್ಟರ್ ಹುತಾತ್ಮ, 4 ನಕ್ಸಲರ ಹತ್ಯೆ

08:29 AM May 10, 2020 | Mithun PG |

ಛತ್ತೀಸ್ ಗಢ: ಶುಕ್ರವಾರ ಪೊಲೀಸರು ಮತ್ತು ಮಾವೋವಾದಿಗಳ  ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುತಾತ್ಮರಾಗಿ , ನಾಲ್ವರು ನಕ್ಷಲರನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ ಘಟನೆ ರಾಜ್ನಂದ್ ಗೌನ್ ಎಂಬ ಗ್ರಾಮದಲ್ಲಿ ನಡೆದಿದೆ.

Advertisement

ಇಲ್ಲಿನ ಮನ್ ಪುರ್ ಪೊಲೀಸ್ ಠಾಣೆ ಸರಹದ್ದಿನ ಪರ್ದೊನಿ ಗ್ರಾಮದ ಸಮೀಪ ಈ ಎನ್ ಕೌಂಟರ್ ನಡೆದಿದೆ.

ನಾಲ್ವರು ನಕ್ಸಲೀಯರ ಶವಗಳು, 1 ಎಕೆ-47 ರೈಫಲ್, 1 ಎಸ್ ಎಲ್ ಆರ್ ಶಸ್ತ್ರಾಸ್ತ್ರ ಮತ್ತು ಎರಡು ಬೋರ್ ರೈಫಲ್ ಗಳನ್ನು ಎನ್ ಕೌಂಟರ್ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ನಂದ್ ಗೌನ್ ಎಎಸ್ಪಿ ಜಿ ಎನ್ ಬಗ್ಹೆಲ್ ತಿಳಿಸಿದ್ದಾರೆ.

ಜುಲೈ 12, 2009 ರಂದು ಇದೇ ಪ್ರದೇಶದಲ್ಲಿ ನಡೆದ ನಕ್ಷಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ  ಪೊಲೀಸ್ ಅಧೀಕ್ಷಕ ವಿ.ಕೆ.ಚೌಬೆ ಸೇರಿದಂತೆ ಇಪ್ಪತ್ತೊಂಬತ್ತು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next