ಟೆಲ್ ಅವೀವ್: ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ನನ್ನು ಹೊಡೆದುರುಳಿಸಿದ ಬಳಿಕ ಇದೀಗ ಇಸ್ರೇಲ್ ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿರುವ ವಸತಿ ಪ್ರದೇಶಗಳ ಮೇಲೆ ಡ್ರೋಣ್ ದಾಳಿ ನಡೆಸುತ್ತಿದೆ. ಇದರೊಂದಿಗೆ ಗಾಜಾದಲ್ಲಿ ಹಮಾಸ್, ಲೆಬೆನಾನ್ ನಲ್ಲಿ ಹೆಜ್ಬುಲ್ಲಾ ಮತ್ತು ಸಿರಿಯಾ ಸೇನೆಯೊಂದಿಗೆ ಯುದ್ಧ ನಡೆಸುತ್ತಿರುವ ಇಸ್ರೇಲ್ ಸೇನೆ ಇದೀಗ ಯೆಮೆನ್ ಮೇಲೂ ತನ್ನ ದಾಳಿಯನ್ನು ಆರಂಭಿಸಿದಂತಾಗಿದೆ.,
ಮೊದಲ ಬಾರಿಗೆ ಬೈರುತ್‌ನ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಬೈರುತ್‌ನಲ್ಲಿ ಭಾನುವಾರ ಸಂಜೆಯಿಂದಲೂ ಇಸ್ರೇಲ್ ಡ್ರೋನ್ ದಾಳಿಯನ್ನು ನಡೆಸುತ್ತಿದೆ.
ಬೈರುತ್‌ನ ಕೋಲಾ ಪ್ರದೇಶದಲ್ಲಿರುವ ಕಟ್ಟಡಗಳನ್ನೂ ಗುರಿಯಾಗಿಸಿ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ. ನಗರ ವ್ಯಾಪ್ತಿಯಲ್ಲಿ ಇದೇ ಮೊದಲ ದಾಳಿಯಾಗಿದ್ದು ಇಸ್ರೇಲ್ ಈಗ ಹಿಜ್ಬುಲ್ಲಾದ ಇತರ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.
ಇಸ್ರೇಲಿ ಡಿಫೆನ್ಸ್ ಫೋರ್ಸ್ (IDF) ಮಾಹಿತಿ ಪ್ರಕಾರ ಕಳೆದ 2 ಗಂಟೆಗಳಲ್ಲಿ ನಮ್ಮ ಯುದ್ಧ ವಿಮಾನಗಳು ಲೆಬನಾನ್‌ನ ಬೆಕಾ ಕಣಿವೆಯಲ್ಲಿ ಡಜನ್‌ಗಟ್ಟಲೆ ಹೆಜ್‌ಬುಲ್ಲಾ ನೆಲೆಗಳನ್ನು ಗುರಿಯಾಗಿಸಿವೆ ಎಂದು IDF ಹೇಳಿದ್ದು . ದಾಳಿಯಲ್ಲಿ ರಾಕೆಟ್ ಲಾಂಚರ್‌ಗಳು ಮತ್ತು ಹೆಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದ ಕಟ್ಟಡಗಳು ಸೇರಿವೆ ಎನ್ನಲಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಸೋಮವಾರ (ಸೆ 30) ಬೆಳಿಗ್ಗೆ ಬೈರುತ್‌ನ ಕೋಲಾ ಜಿಲ್ಲೆಯ ಅಪಾರ್ಟ್‌ಮೆಂಟ್‌ನ ಮೇಲೆ ಇಸ್ರೇಲಿ ವಾಯು ದಾಳಿ ನಡೆಸಿದೆ. ಬೈರುತ್ ನಗರದ ಗಡಿಯಲ್ಲಿ ಹೆಜ್ಬೊಲ್ಲಾ ಜೊತೆ ಹೆಚ್ಚುತ್ತಿರುವ ಹಗೆತನದ ನಂತರ ಇದು ಮೊದಲ ಇಸ್ರೇಲಿ ದಾಳಿಯಾಗಿದೆ.