Advertisement

100 ಅಡಿ ಬಾವಿಗೆ ಬಿದ್ದಿದ್ದ ನಾಲ್ಕು ಸಿಂಹಗಳ ರಕ್ಷಣೆ

10:30 AM Sep 17, 2019 | sudhir |

ಅಹಮದಾಬಾದ್‌: ಗುಜರಾತ್‌ನ ಗಿರ್‌ ಅರಣ್ಯದಲ್ಲಿ 100 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ನಾಲ್ಕು ಸಿಂಹಗಳನ್ನು ಭಾನುವಾರ ರಕ್ಷಿಸಲಾಗಿದೆ. ಸರಸಿಯಾ ಪ್ರಾಂತ್ಯದಲ್ಲಿ ತಿರುಗಾಡುತ್ತಿದ್ದ 2-3 ವರ್ಷದ ಸಿಂಹಗಳು ಶನಿವಾರ ಬಾವಿಗೆ ಬಿದ್ದಿದ್ದವು. ಈ ಬಾವಿ ಬಳಸದೆ ಬಿಟ್ಟಿರುವ ಕೃಷಿ ಭೂಮಿಯಲ್ಲಿತ್ತು. ಈ ಜಮೀನಿನ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಶನಿವಾರ ರಾತ್ರಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಸಿಂಹಗಳನ್ನು ಬಾವಿಯಿಂದ ಎತ್ತಿ ತೆಗೆಯಲು ಗ್ರಾಮದ ಜನರು ನೆರವಾಗಿದ್ದಾರೆ.

Advertisement

ಈ ಭಾಗದಲ್ಲಿ ಪಾಳು ಬಾವಿಗೆ ಸಿಂಹಗಳು ಬೀಳುವುದು ಅತ್ಯಂತ ಸಾಮಾನ್ಯವಾಗಿದ್ದು, 37 ಸಾವಿರ ತೆರೆದ ಬಾವಿಗಳಿಗೆ ಪ್ರಾಕಾರ ನಿರ್ಮಿಸಿದ್ದೇವೆ ಎಂದು ಇತ್ತೀಚೆಗಷ್ಟೇ ಗುಜರಾತ್‌ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿತ್ತು. ರಾಜ್ಯದಲ್ಲಿ ಸುಮಾರು 50 ಸಾವಿರ ತೆರೆದ ಬಾವಿಗಳಿದ್ದು, ಇವು ವನ್ಯಜೀವಿಗಳಿಗೆ ಅಪಾಯಕರವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next