Advertisement

2 ವರ್ಷಗಳಲ್ಲಿ 4 ಲಕ್ಷ ಮನೆ: ಸಚಿವ ಸೋಮಣ್ಣ

12:39 AM Jan 09, 2020 | Sriram |

ಉಡುಪಿ: ರಾಜ್ಯದಲ್ಲಿ 2 ವರ್ಷಗಳ ಕಾಲಮಿತಿಯಲ್ಲಿ 4 ಲಕ್ಷ ಬಡವರಿಗೆ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಈ ಮೂಲಕ ಯಾವುದೇ ಕುಟುಂಬ ವಸತಿ ರಹಿತವಾಗದಂತೆ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ರಾಜ್ಯದ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಬುಧವಾರ ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ- ಸರ್ವರಿಗೂ ಸೂರು (ನಗರ)(ಜಿ+3) ಮಾದರಿಯ 460 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ವರ್ಷ 43,000 ಮನೆಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 39,000 ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೊಳೆಗೇರಿಯ ವಸತಿ ಯೋಜನೆಗೆ ಈ ಹಿಂದೆ ಇದ್ದ ಆದಾಯದ ಮಿತಿಯನ್ನು 75,000 ರೂ.ಗಳಿಂದ 3 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮದಿಂದ ಫ‌ಲಾನುಭಗಳಿಗೆ ಬಿಡುಗಡೆ ಮಾಡು ತ್ತಿದ್ದ ಅನುದಾನವನ್ನು ಗ್ರಾಮೀಣ ಪ್ರದೇಶದಲ್ಲಿ ಜಿ.ಪಂ. ಸಿಇಒಗಳು ಮತ್ತು ನಗರ ಪ್ರದೇಶದಲ್ಲಿ ಜಿಲ್ಲಾಧಿ ಕಾರಿಗಳ ಮೂಲಕ ಬಿಡುಗಡೆ ಮಾಡಲು
ತೀರ್ಮಾನಿಸಲಾಗಿದೆ. ಈ ಮೂಲಕ ವಸತಿ ರಹಿತರ ಮುಕ್ತ ರಾಜ್ಯವನ್ನಾಗಿ ಸಲಾಗುವುದು ಎಂದರು.

ಆತ್ಮಗೌರವ ಹೆಚ್ಚಳ
ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 2022ರ ವೇಳೆಗೆ ಸರ್ವರಿಗೂ ಸೂರು ದೊರೆಯಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಜಾರಿಯಾಗಿದ್ದು, ರಾಜ್ಯದಲ್ಲೂ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಸ್ವಂತ ಮನೆ ಎನ್ನುವುದು ವ್ಯಕ್ತಿಯೊಬ್ಬನ ಆತ್ಮಗೌರವ ಹೆಚ್ಚಿಸಲಿದೆ ಎಂದರು.

2021ರೊಳಗೆ ಮುಕ್ತಾಯ
ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿ, ಪ್ರಸ್ತುತ ಇಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವಿನ ಜತೆಗೆ ಉಡುಪಿ ನಗರಸಭೆ ಯಿಂದ ಮನೆ ನಿರ್ಮಾಣದ ಒಟ್ಟು ವೆಚ್ಚದ ಶೇ. 10ರ ಮೊತ್ತವನ್ನು ಭರಿಸ ಲಾಗುತ್ತಿದೆ. ಉಳಿದ ಮೊತ್ತಕ್ಕೆ ಬ್ಯಾಂಕ್‌ ಆಫ್ ಬರೋಡಾ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ 30 ವರ್ಷಗಳ ಅವಧಿಗೆ ಫ‌ಲಾನುಭವಿಗಳಿಗೆ ಸಾಲದ ವ್ಯವಸ್ಥೆ ಮಾಡಲಾಗಿದೆ. 2021ರ ಮೇ ಒಳಗೆ ಕಾಮಗಾರಿ ಮುಕ್ತಾಯ ಗೊಳ್ಳಲಿದೆ ಎಂದರು.

Advertisement

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶವನ್ನು ಕೊಳೆಗೇರಿ ಮುಕ್ತವಾಗಿಸುವ ಸಂಕಲ್ಪವನ್ನು ಪ್ರಧಾನಿ ಮೋದಿ ಮಾಡಿದ್ದು, ಉಡುಪಿ ನಗರದ ಕೊಳೆಗೇರಿಗಳಿಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ ಎಂದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯೆ ಜಯಲಕ್ಷ್ಮೀ, ಡಿಸಿ ಜಿ. ಜಗದೀಶ್‌, ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಶಿವಪ್ರಸಾದ್‌, ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಬ್ಯಾಂಕ್‌ ಆಫ್ ಬರೋಡಾದ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ, ಡಿ. ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿ ಬಾಲರಾಜ್‌ ಸ್ವಾಗತಿಸಿದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ನಿರ್ವಹಿಸಿದರು.

ಪ್ರಸ್ತುತ ನಿರ್ಮಾಣವಾಗು ತ್ತಿರುವ 460 ಮನೆಗಳ ಸಂಖ್ಯೆಯನ್ನು ಎಲ್ಲ ಮೂಲ ಸೌಕರ್ಯಗಳೊಂದಿಗೆ 1,000ಕ್ಕೆ ವಿಸ್ತರಿಸಲಾಗುವುದು. ಕಳಪೆ ಕಾಮ ಗಾರಿ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು.
– ವಿ. ಸೋಮಣ್ಣ ವಸತಿ, ತೋಟಗಾರಿಕೆ, ರೇಷ್ಮೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next