Advertisement

ದೇಶದಲ್ಲಿ ಅಪಘಾತದಿಂದ 4 ಲಕ್ಷ ಸಾವು; ಬೈಕ್‌ ಓಡಿಸುವಾಗ ಮೊಬೈಲ್‌ ಬಳಸಬೇಡಿ

04:03 PM Jan 29, 2021 | Team Udayavani |

ವಾಡಿ: ಕಳೆದ ವರ್ಷ 2020ನೇ ಸಾಲಿನಲ್ಲಿ ದೇಶದ ವಿವಿಧೆಡೆ ಸಂಭವಿಸಿದ್ದ ರಸ್ತೆ ಅಪಘಾತಗಳಲ್ಲಿ ಒಟ್ಟು 4.51 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದಾರೆ ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ಕಳವಳ ವ್ಯಕ್ತಪಡಿಸಿದರು.

Advertisement

ಪಟ್ಟಣದ ಎಸಿಸಿ ಟ್ರಸ್ಟ್‌ ಆಸ್ಪತ್ರೆಯಲ್ಲಿ ಸ್ಥಳೀಯ ಪೊಲೀಸ್‌ ಠಾಣೆ ವತಿಯಿಂದ ವಾಹನ ಚಾಲಕರಿಗಾಗಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರ ಮತ್ತು ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ವಾಹನ ಚಾಲಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಅಮಾಯಕ ಜನರು ಜೀವ ಕಳೆದುಕೊಳ್ಳುವಂತೆ ಆಗಿದೆ. ಮದ್ಯಪಾನ ಸೇವಿಸಿ ವಾಹನ ಓಡಿಸುವುದು, ಥ್ರಿಬಲ್‌ ರೈಡಿಂಗ್‌ ಬೈಕ್‌ ಸವಾರಿ, ಬೈಕ್‌ ಓಡಿಸುವಾಗ ಮೊಬೈಲ್‌ ನೋಡುವುದು, ಮಾತಾಡುವುದು ಮತ್ತು ಅತಿಯಾದ ವೇಗ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತವೆ ಎಂದರು. ಚಾಲನಾ ಪರವಾನಗಿ, ಜೀವವಿಮೆ ಇಲ್ಲದೆ ಇರುವುದು ದಂಡಾರ್ಹ ಅಪರಾಧ ಆಗುತ್ತದೆ. ಚಾಲಕರಲ್ಲಿ ಕಾನೂನಿನ ಭಯ ಮೂಡಿಸಲು ದಂಡ ವಿಧಿ ಸಲಾಗುತ್ತದೆ. ಕಾನೂನು ಪಾಲಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಸಿಸಿ ಟ್ರಸ್ಟ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಸಂಜಯ ಅಳ್ಳೊಳ್ಳಿ ಮಾತನಾಡಿ, ಸುರಕ್ಷಿತ ವಾಹನ ಚಾಲನೆಗೆ ಚಾಲಕರ ಆರೋಗ್ಯವೂ ಮುಖವಾಗುತ್ತದೆ.
ಹೃದಯಾಘಾತದಂತ ಅನಿರೀಕ್ಷಿತ ಅನಾರೋಗ್ಯ ಪರಿವರ್ತನೆಯು ವಾಹನ ಅಪಘಾತಕ್ಕೆ ಕಾರಣವಾಗಿ ಹಲವಾರು ಪ್ರಯಾಣಿಕರ ಜೀವ ನುಂಗುತ್ತದೆ ಎಂದರು.

ಕಾರು ಚಾಲಕರ ಸಂಘದ ಮುಖಂಡ ಕರಣಪ್ಪ ಆಂದೋಲಾ, ಕ್ರೂಸರ್‌ ಚಾಲಕರ ಸಂಘದ ಬಶೀರ್‌ ಖಾನ್‌, ಆಟೋ ಚಾಲಕರ ಸಂಘದ ಸದ್ದಾಮ ಹುಸೇನ್‌, ಎಸಿಸಿ ಟ್ರಸ್ಟ್‌ ಆಸ್ಪತ್ರೆ ಸಿಬ್ಬಂದಿಗಳಾದ ಶಿವುಕುಮಾರ ಪುರಮಕರ, ಪ್ರೇಮಕುಮಾರ ಚವ್ಹಾಣ, ರಾಘವೇಂದ್ರ ಗುತ್ತೇದಾರ, ದೀಪಕ ಮಾನೆ, ಶೃತಿ ಬನ್ನೇಟಿ, ಗಾಯತ್ರಿ ನಾಟೇಕರ, ಮುಖ್ಯ ಕಾನ್ಸ್‌ಟೇಬಲ್‌ ಗಳಾದ ದೊಡ್ಡಪ್ಪ ಪೂಜಾರಿ, ದತ್ತಾತ್ರೇಯ ಜಾನೆ, ಚಾಲಕರಾದ ಚಾಂದ್‌, ಬಸವರಾಜ ಯಕಿcಂತಿ ಪಾಲ್ಗೊಂಡಿದ್ದರು. ಇದೇ ವೇಳೆ ನೂರಾರು ಖಾಸಗಿ ವಾಹನ ಚಾಲಕರ ಆರೋಗ್ಯ ತಪಾಸಣೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next