ಬೆಂಗಳೂರು: ಪರಿಶೀಲನೆ ಮುಗಿದಿರುವ 4 ಲಕ್ಷ ಬಿಪಿಎಲ್ ಅರ್ಜಿಗಳಿಗೆ ಒಂದು ತಿಂಗಳಲ್ಲಿ ಮುಕ್ತಿ ನೀಡಲಾಗುವುದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಬಿಪಿಎಲ್ ಕಾರ್ಡ್‌ಗೆ 15.53 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 8.03 ಲಕ್ಷ ಅರ್ಹ ಅರ್ಜಿದಾರರಿಗೆ ಪಡಿತರ ಕಾರ್ಡ್ ನೀಡಲಾಗಿದೆ.
ಕೋವಿಡ್ ಕಾರಣದಿಂದ ಮನೆಮನೆಗೆ ತೆರಳಿ ಬಯೋಮೆಟ್ರಿಕ್ ಪಡೆದುಕೊಳ್ಳುವುದು ಕಷ್ಟವಾಗಿದ್ದರಿಂದ ಅರ್ಜಿಗಳ ವಿಲೇವಾರಿಗೆ ವಿಳಂಬವಾಗಿದೆ.
ಇದನ್ನೂ ಓದಿ:“ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ” ಪ್ರಿ-ಪೇಯ್ಡ್ ಪ್ಲಾನ್ ಲಾಂಚ್ ಮಾಡಿದ ಜಿಯೋ
ಬಾಕಿ 8 ಲಕ್ಷ ಅರ್ಜಿಗಳ ಪೈಕಿ ಪರಿಶೀಲನೆ ಮುಗಿದಿರುವ 4 ಲಕ್ಷ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಲಾಗುವುದು. ಉಳಿದವುಗಳನ್ನು ಜೂನ್ ತಿಂಗಳೊಳಗೆ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.