Advertisement

ಯು.ಕೆ.ಹಡಗಿನಲ್ಲಿ ನಾಲ್ವರು ಕೇರಳಿಗರು

09:09 AM Jul 23, 2019 | sudhir |

ಟೆಹ್ರಾನ್‌/ತಿರುವನಂತಪುರ: ಇರಾನ್‌ ವಶ ಪಡಿಸಿಕೊಂಡಿರುವ ಯುನೈಟೆಡ್‌ ಕಿಂಗ್‌ಡಮ್‌ನ ತೈಲ ಹಡಗಿನಲ್ಲಿ ಇರುವ 18 ಭಾರತೀಯರ ಪೈಕಿ ನಾಲ್ವರು ಕೇರಳದವರು. ರವಿವಾರ ಈ ಅಂಶ ಬೆಳಕಿಗೆ ಬಂದಿದ್ದು, ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇರಳ ಸಿಎಂ ಕಚೇರಿ ಟ್ವೀಟ್ ಮಾಡಿದೆ.

Advertisement

ಆರೋಗ್ಯದಿಂದ ಇದ್ದಾರೆ: ವಶಪಡಿಸಿಕೊಳ್ಳಲಾಗಿರುವ ತೈಲ ಹಡಗು ‘ಸ್ಟೆನಾ ಇಂಪೆರಿಯೋ’ದಲ್ಲಿರುವ ಎಲ್ಲ 23 ಮಂದಿಯ ಆರೋಗ್ಯ ಚೆನ್ನಾಗಿಯೇ ಇದೆ ಎಂದು ಇರಾನ್‌ ಹೇಳಿದೆ. ಅದರ ಬಗ್ಗೆ ತನಿಖೆ ಶುರು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಹಡಗಿನ ಕ್ಯಾಪ್ಟನ್‌ ಮತ್ತು ಇತರ ಸಿಬಂದಿ ಯಾವ ರೀತಿ ಸಹಕರಿಸಲಿದ್ದಾರೆ ಎಂಬುದರ ಮೇಲೆ ಅಂತಿಮ ಪ್ರಗತಿ ಇದೆ ಎಂದಿದೆ. ಇಷ್ಟು ಮಾತ್ರವಲ್ಲದೆ ಇರಾನ್‌ ಸರಕಾರ ಹಡಗು ವಶಪಡಿಸಿಕೊಂಡ ಕಾರ್ಯಾಚರಣೆಯ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿದೆ. ಇದರ ಜತೆಗೆ ಬ್ರಿಟನ್‌ನ ರಾಯಲ್ ನೇವಿ ಮತ್ತು ಇರಾನ್‌ನ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್‌ ಕಾಪ್ಸ್‌ರ್ ನಡುವೆ ನಡೆದ ರೇಡಿಯೋ ಸಂಭಾಷಣೆಯೂ ಈಗ ಬಯಲಾಗಿದೆ.

ಇದೇ ವೇಳೆ ಪನಾಮಾದ ಅಧಿಕಾರಿಗಳು ತೈಲ ಹಡಗು ಎಂ.ಟಿ.ರಿಯಾಗೆ ನೀಡಲಾಗಿರುವ ಮಾನ್ಯತೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಜು. 14ರಂದು ಸ್ಟ್ರೈಟ್ ಆಫ್ ಹೊರ್ಮುಜ್‌ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಹಡಗು ನಿಗಾ ವ್ಯವಸ್ಥೆಯಿಂದ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next