Advertisement

Drone Strike: ಇಸ್ರೇಲ್ ಸೇನಾ ನೆಲೆ ಮೇಲೆ ಡ್ರೋನ್ ದಾಳಿ: 4 ಯೋಧರು ಮೃತ್ಯು, 60 ಮಂದಿಗೆ ಗಾಯ

08:57 AM Oct 14, 2024 | Team Udayavani |

ಟೆಲ್ ಅವಿವ್: ಮಧ್ಯ ಇಸ್ರೇಲ್‌ನ ಬಿನ್ಯಾಮಿನಾ ಬಳಿಯ ಸೇನಾ ನೆಲೆಯ ಮೇಲೆ ಲೆಬನಾನ್‌ನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ರೇಲ್ ನ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಇಸ್ರೇಲ್ ಮಿಲಿಟರಿ ಮಾಹಿತಿ ನೀಡಿದೆ.

Advertisement

ಭಾನುವಾರ(ಅ.13) ರಾತ್ರಿ ನಡೆಸಿದ ಈ ದಾಳಿಯಲ್ಲಿ 4 ಇಸ್ರೇಲಿ ಸೈನಿಕರು ಮೃತಪಟ್ಟಿದ್ದು ಮತ್ತು 67 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಲೆಬನಾನಿನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ, ಇದು ಐಡಿಎಫ್‌ನ ಗೋಲಾನಿ ಬ್ರಿಗೇಡ್ ತರಬೇತಿ ನೆಲೆಯನ್ನು ಗುರಿಯಾಗಿಸಿ ನಡೆಸಿದ ದಾಳಿಯಾಗಿದೆ ಎಂದು ಹೇಳಿದೆ. ಇಸ್ರೇಲ್ ಸೇನೆ ಇತ್ತೀಚಿಗೆ ಲೆಬನಾನ್ ಮೇಲೆ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

ಮೊಳಗದ ಸೈರನ್:
ಭಾನುವಾರ ರಾತ್ರಿ ಸುಮಾರು 7 ಗಂಟೆಯ ಮೊದಲು ಡ್ರೋನ್ ದಾಳಿ ನಡೆಸಲಾಗಿದೆ ಎಂದು IDF ಹೇಳಿದೆ. ಸೇನಾ ಶಿಬರವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು ಈ ವೇಳೆ ನಾಲ್ವರು ಯೋಧರು ಮೃತಪಟ್ಟರೆ, ಏಳು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಐಡಿಎಫ್ ವರದಿ ಮಾಡಿದೆ. 28 ಮಂದಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಡ್ರೋನ್ ಆಗಮನದ ಮೊದಲು ಯಾವುದೇ ಸೈರನ್ ಮೊಳಗಲಿಲ್ಲ, ಇದರಿಂದಾಗಿ ಸೈನಿಕರು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

Yesterday, a UAV launched by the Hezbollah terrorist organization hit an army base.

4 IDF soldiers were killed in the incident.

The IDF shares in the grief of the bereaved families and will continue to accompany them.

We ask to refrain from spreading rumours and the names of…

— Israel Defense Forces (@IDF) October 13, 2024

Advertisement

ಇದನ್ನೂ ಓದಿ: BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?

Advertisement

Udayavani is now on Telegram. Click here to join our channel and stay updated with the latest news.

Next