Advertisement

Chennai Airshow; ಸುಡು ಬಿಸಿಲಿಗೆ 4 ಸಾ*ವು:200 ಮಂದಿ ಆಸ್ಪತ್ರೆಗೆ

02:04 AM Oct 07, 2024 | Team Udayavani |

ಚೆನ್ನೈ: ಚೆನ್ನೈನ ಮರೀನಾ ಬೀಚ್‌ನಲ್ಲಿ ಆಯೋಜಿಸ ಲಾಗಿದ್ದ ಏರ್‌ಶೋ ವೇಳೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದಾರೆ. ಇದರಿಂದಾಗಿ ಸುಡುಬಿಸಿಲು, ನಿರ್ಜಲೀಕ­ರ­ಣಕ್ಕೆ 4 ಮಂದಿ ಅಸು ನೀಗಿ ದ್ದಾರೆ. ಮರಣೋತ್ತರ ಪರೀಕ್ಷೆ ಬಂದ ಬಳಿಕ ಖಚಿತ ಕಾರಣ ಗೊತ್ತಾಗ ಬ ಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸುಮಾರು 230ಕ್ಕೂ ಅಧಿಕ ಮಂದಿ ಸ್ಥಳದಲ್ಲಿಯೇ ಮೂಛೆì ಹೋಗಿದ್ದಾರೆ. ಕೂಡಲೇ ಅಲ್ಲಿ ಇದ್ದ ಪೊಲೀಸರು ಮತ್ತು ಇತರ ರಕ್ಷಣ ಕಾರ್ಯಕರ್ತರು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ದ್ದಾರೆ. ಐಎಎಫ್ನ 92ನೇ ವರ್ಷಾಚರಣೆ ಹಿನ್ನೆಲೆ ಯಲ್ಲಿ ಏರ್‌ಶೋ ಆಯೋಜಿಸಲಾಗಿತ್ತು. 16 ಲಕ್ಷ ಮಂದಿ ಸೇರಿಸಿ, ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಸೇರಿಸುವ ಬಗ್ಗೆ ಉದ್ದೇಶ ಹೊಂದಲಾಗಿತ್ತು. ಏರ್‌ಶೋ ಹಿನ್ನೆಲೆಯಲ್ಲಿ ರವಿವಾರ ಭಾರೀ ಜನ ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next