Advertisement

ಐದು ಗಂಟೆ ಶಸ್ತ್ರಚಿಕಿತ್ಸೆ ರಾಡ್‌ ತೆಗೆದ ವೈದ್ಯರು

07:30 AM Mar 15, 2018 | Team Udayavani |

ಮುಂಬೈ: ಹೆಚ್ಚುಕಡಿಮೆ ಐದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಜೆ.ಜೆ. ಆಸ್ಪತ್ರೆಯ ವೈದ್ಯರ ತಂಡ ವ್ಯಕ್ತಿಯೊಬ್ಬರ ದೇಹದೊಳಕ್ಕೆ ಹೊಕ್ಕ ನಾಲ್ಕು ಅಡಿ ಕಬ್ಬಿಣದ ಸಲಾಕೆಯನ್ನು ಹೊರ ತೆಗೆಯಲಾಗಿದೆ. 33 ವರ್ಷದ ನಾಸಿಕ್‌ನ  ಕೂಲಿಕಾರ ನಸೀಮ್‌ ಶೇಖ್‌ಗೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ರಾಡ್‌ ತೊಡೆಭಾಗದಲ್ಲಿ ಪ್ರವೇಶಿಸಿ  ಕತ್ತಿನ ಭಾಗದಲ್ಲಿ ಹೊರಬಂದಿತ್ತು. ಮಾ.8ರಂದು ಈ ಘಟನೆ ನಡೆದಿತ್ತು. ನಾಸಿಕ್‌ನ ಸ್ಥಳೀಯ ಆಸ್ಪತ್ರೆಯಲ್ಲಿ  ಶಸ್ತ್ರಚಿಕಿತ್ಸೆ ಸಾಧ್ಯವಾಗದ್ದರಿಂದ ಮುಂಬೈನ ಜೆ.ಜೆ. ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆ ತಂದಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಗ್ಗೆ ವೈದ್ಯ ಅಜಯ ಭಂಡಾವರ್‌ ಸಂತಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next