ನವದೆಹಲಿ: ಅಂದಾಜು 4 ಕೋಟಿ ಅರ್ಹ ಫಲಾನುಭವಿಗಳು ಜುಲೈ 18ರವರೆಗೆ ಒಂದೇ ಒಂದು ಡೋಸ್ ಕೋವಿಡ್ 19 ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಕಳ್ಳತನಕ್ಕಾಗಿ ತ.ನಾಡಿನಿಂದ ಬೆಂಗಳೂರಿಗೆ ಪಯಣ: ಡಿಯೋ ಸ್ಕೂಟರ್ ಗಳೇ ಇವರ ಟಾರ್ಗೆಟ್
ಜುಲೈ 18ರವರೆಗೆ ದೇಶಾದ್ಯಂತ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ 1,78,38,52,566 ಕೋಟಿ ಡೋಸ್ ಲಸಿಕೆಯನ್ನು (ಶೇ.97.34) ನೀಡಿರುವುದಾಗಿ ಭಾರತಿ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.
ಸುಮಾರು 4 ಕೋಟಿ ಜನರು ಮೊದಲ ಕೋವಿಡ್ ಲಸಿಕೆಯನ್ನೂ ಪಡೆದಿಲ್ಲ. ಭಾರತದಲ್ಲಿ ಈವರೆಗೂ ಒಂದೇ ಒಂದು ಕೋವಿಡ್ ಲಸಿಕೆ ಪಡೆಯದವರ ಬಗ್ಗೆ ಮಾಹಿತಿ ನೀಡುವಂತೆ ಕೇಳಿರುವ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಹಾಗೂ 60 ವರ್ಷದಿಂದ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಅನ್ನು ನೀಡಲಾಗುತ್ತಿದೆ. ಏಪ್ರಿಲ್ 10ರಿಂದ 18-59 ವರ್ಷದ ವಯೋಮಾನದವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ವರದಿ ತಿಳಿಸಿದೆ.