Advertisement
ಸುಮಾರು 20,534.50 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಮರಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದೆ. ರೋಗ ನಿಯಂತ್ರಣಕ್ಕೆ ಪ್ರತಿ ಹೆಕ್ಟೇರ್‌ಗೆ 4 ಸಾವಿರ ರೂ.ಗಳಂತೆ 1.50 ಹೆಕ್ಟೇರ್ ಪ್ರದೇಶದವರೆಗೆ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಹಾಯಧನ ನೀಡಲು ಅಂದಾಜು 8 ಕೋ.ರೂ. ಅಗತ್ಯವಿದೆ. ಆರಂಭದಲ್ಲಿ 10,000 ಹೆಕ್ಟೇರ್ ಪ್ರದೇಶಕ್ಕೆ ಮೊದಲನೇ ಸಿಂಪಡಣೆಗೆ 4 ಕೋ.ರೂ. ಆವಶ್ಯಕತೆ ಮನಗಂಡು ಸರಕಾರ ಅನುದಾನ ನೀಡಿದೆ.
ಬೆಳ್ತಂಗಡಿ ತಾಲೂಕಿನ ಎಳನೀರು ವ್ಯಾಪ್ತಿ ಬಡಾಮನೆ, ಗುತ್ಯಡ್ಕ, ಬಂಗಾರಪಲ್ಕೆ, ಕುಕ್ಕಡ ವ್ಯಾಪ್ತಿಯ 150ರಿಂದ 200 ಎಕ್ರೆಗೂ ಅಧಿಕ ಅಡಿಕೆ ಕೃಷಿಗೆ ಎಲೆ ಚುಕ್ಕಿರೋಗ ಬಾಧಿಸಿತ್ತು. ಹಿಂಗಾರ, ಎಲೆಗಳು ಕೆಂಪುಬಣ್ಣಕ್ಕೆ ತಿರುಗಿ ಮರಗಳು ಸಾಯಲಾರಂಭಿಸಿತ್ತು. ಇದರಿಂದ ರೈತರು ಸಂಪೂರ್ಣ ನಷ್ಟ ಅನುಭವಿಸಿದ್ದರು. ಉದಯವಾಣಿ ವರದಿ
ಈ ಬಗ್ಗೆ 2020ರ ಅಕ್ಟೋಬರ್‌ನಲ್ಲಿ ಉದಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರು ಮತ್ತು ವಿಜ್ಞಾನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಅನುದಾನಕ್ಕಾಗಿ ಸರಕಾರಕ್ಕೆ ಬರೆಯಲಾಗಿತ್ತು. ಇದೀಗ ಸರಕಾರ ಎಚ್ಚೆತ್ತುಕೊಂಡು ಪರಿಹಾರ ಕ್ರಮಕ್ಕೆ ಅನುದಾನ ಒದಗಿಸಿದೆ. ಆದರೆ ಈವರೆಗೆ ರೈತರು ಅನುಭವಿಸಿದ ನಷ್ಟಕ್ಕೆ ಪರಿಹಾರ ಒದಗಿಸಿಲ್ಲ. ಈಗ ನೀಡುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ ಎಂಬುದು ಸಂತ್ರಸ್ತ ರೈತರ ನಿಲುವಾಗಿದೆ.
Related Articles
Advertisement
ಎಳನೀರು ಪ್ರದೇಶದ ಅಡಿಕೆ ತೋಟಗಳಲ್ಲಿ ಕಂಡುಬಂದ ಎಲೆ ಚುಕ್ಕಿ ರೋಗ ಕಳಸ ಭಾಗದಿಂದ ಹರಡಿರುವ ಸಾಧ್ಯತೆಯಿದೆ. ಇದೀಗ ರೋಗ ಹತೋಟಿ ಕ್ರಮಕ್ಕೆ ರೈತರು ಬಳಸುವ ಔಷಧ ವೆಚ್ಚಕ್ಕೆ ಸರಕಾರವು ಸಹಾಯಧನ ಒದಗಿಸಿದೆ.– ಕೆ.ಎಸ್.ಚಂದ್ರಶೇಖರ್,
ಹಿರಿಯ ತೋಟಗಾರಿಕೆ ನಿರ್ದೇಶಕ,
ಬೆಳ್ತಂಗಡಿ ತೋಟಗಾರಿಕೆ ಇಲಾಖೆ