ತಿರುಪತಿ: ರದ್ದಾಗಿರುವ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಇನ್ನೂ ತಿರುಮಲ ವೆಂಕಟೇಶ್ವರನ ಹುಂಡಿ ಸೇರುತ್ತಿವೆ. ಅಚ್ಚರಿ ಎನ್ನುವಂತೆ, ಕಳೆದ ಎರಡು ತಿಂಗಳಲ್ಲಿ 4 ಕೋಟಿ ರೂ.ನಷ್ಟು ರದ್ದಾಗಿರುವ ನೋಟು ತಿಮ್ಮಪ್ಪನ ಹುಂಡಿಗೆ ಹಾಕಲಾಗಿದೆ. ನೋಟು ಬದಲಾವಣೆಯ ಸಮಯ ಮುಗಿದ ಬಳಿಕವೂ ಗತಿ ಇಲ್ಲ ಎಂಬಂತೆ ತಿರುಮಲ ದೇವಾಲಯದ ಹುಂಡಿಗೆ ನೋಟುಗಳು ಸೇರುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಸಂಬಂಧ ಇದೀಗ ದೇವಾಲಯ ಆಡಳಿತ ಮಂಡಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ನೋಟುಗಳ ಬದಲಾವಣೆಗೆ ಅವಕಾಶ ಕೋರಿದೆ. ಪ್ರತಿದಿನ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೀಗಾಗಿ ಯಾರು ಈ ನೋಟುಗಳನ್ನು ಹುಂಡಿಗೆ ಹಾಕಿದ್ದಾರೆನ್ನುವುದನ್ನು ಕಂಡುಕೊಳ್ಳುವುದು ಕಷ್ಟಸಾಧ್ಯ. ನೋಟು ಬದಲಾವಣೆ
ಪ್ರಕ್ರಿಯೆ ಡಿ.30ರಂದೇ ಕೊನೆಗೊಂಡಿದೆ.