Advertisement

ಆಧಾರ್‌ ನಂಬರ್‌- ವೋಟರ್‌ ಐಡಿ ಲಿಂಕ್‌; ಕೇಂದ್ರದ ಮಹತ್ವದ ತೀರ್ಮಾನ

01:37 AM Dec 16, 2021 | Team Udayavani |

ಹೊಸದಿಲ್ಲಿ: ಪಾನ್‌ ಕಾರ್ಡ್‌ ಮತ್ತು ಆಧಾರ್‌ ಲಿಂಕ್‌ ಆಯಿತು. ಇನ್ನು ಚುನಾವಣ ಆಯೋಗ ನೀಡುವ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಬೇಕಿದೆ.

Advertisement

ಚುನಾವಣ ಆಯೋಗ ಬಹಳ ಕಾಲ ದಿಂದ ನಿರೀಕ್ಷೆ ಮಾಡುತ್ತಿದ್ದ ಸುಧಾರಣೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸದ್ಯ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಿ ಅಂಗೀಕಾರ ಪಡೆಯುವ ಇರಾದೆ ಯನ್ನು ಸರಕಾರ ಹೊಂದಿದೆ.

ಆದರೆ ಈ ಪ್ರಕ್ರಿಯೆ ಐಚ್ಛಿಕ ವಾಗಿರು ತ್ತದೆ. ಪ್ರತಿಯೊಂದು ವಿಚಾರಕ್ಕೂ ಆಧಾರ್‌ ಕಡ್ಡಾಯ ಮಾಡಬಾರದು ಮತ್ತು ಪ್ರಜೆಯ ವೈಯಕ್ತಿಕ ಮಾಹಿತಿ ರಕ್ಷಣೆ ಮಾಡಬೇಕು ಎಂಬ ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ.

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾ ವಣೆ ಮುಂದಿನ ವರ್ಷ ನಡೆಯ ಲಿರುವಂತೆಯೇ ಕೇಂದ್ರ ಸರಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ.

ಇದನ್ನೂ ಓದಿ:ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಬಾಂಗ್ಲಾ ವಿರುದ್ಧ 9-0 ಭರ್ಜರಿ ಜಯ

Advertisement

ಇತರ ಕ್ರಮಗಳು
ಮುಂದಿನ ವರ್ಷದಿಂದ 18 ವರ್ಷ ಮೇಲ್ಪಟ್ಟವರಿಗೆ ಇನ್ನು ಮತ ದಾರರ ಪಟ್ಟಿಯಲ್ಲಿ 4 ಬಾರಿ ನೋಂದಣಿಗೆ ಅವಕಾಶ, ಚುನಾವಣ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಮತ್ತು ಮತ ನಕಲು ತಡೆಯುವುದು, ಮತದಾ
ರರ ಪಟ್ಟಿ ಮತ್ತಷ್ಟು ಬಲ ಪಡಿಸುವುದು ಸೇರಿದೆ. ಪ್ರಾಯೋ ಗಿಕವಾಗಿ ಈ ಅಂಶ ಗಳನ್ನು ಅನುಷ್ಠಾನ ಗೊಳಿಸಿದ ವೇಳೆ ಯಶಸ್ಸು ಕಂಡಿದೆ ಎಂದು ಚುನಾವಣ ಆಯೋಗ ಹೇಳಿಕೊಂಡಿದೆ.

ಲಿಂಗ ಸಮಾನತೆ
ಸೇನೆಯಲ್ಲಿ ಪತ್ನಿ ಹಿರಿಯ ಅಧಿಕಾರಿಯಾಗಿದ್ದರೆ ಪತಿಗೆ ಕೂಡ ಮತ ಚಲಾಯಿಸಲು ಅಧಿಕಾರ ನೀಡಲಾಗುತ್ತದೆ. ಹಾಲಿ ನಿಯಮದಲ್ಲಿ ಸೇನೆಯಲ್ಲಿ ಪತಿ ಅಧಿಕಾರಿ ಯಾಗಿದ್ದರೆ, ಪತ್ನಿಗೆ ಅವರು ಕರ್ತವ್ಯ ನಿರ್ವಹಿಸುವಸ್ಥಳದಲ್ಲಿಯೇ ಮತ ಚಲಾಯಿಸಲು ಅವಕಾಶ ಇದೆ. ಸೇನಾಪಡೆಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆಯರೂ ಪ್ರವೇಶ ಪಡೆಯು ತ್ತಿರುವ ಹಿನ್ನೆಲೆಯಲ್ಲಿ ಲಿಂಗ ಸಮಾನತೆ ಸಾರುವಲ್ಲಿ ಈ ಅಂಶ ಮುಖ್ಯವಾಗಲಿದೆ.

ಯಾಕಾಗಿ ಈ ಕ್ರಮ?
-ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ದಶಕಗಳಿಂದಲೂ ಬೇಡಿಕೆ ಇದೆ.
– ನಕಲಿ ಮತದಾನ ತಡೆಯುವ ನಿಟ್ಟಿನಲ್ಲಿ ಈ ಕ್ರಮ
– ಎನ್‌ಆರ್‌ಐಗಳಿಗೆ ಆನ್‌ಲೈನ್‌ ಮೂಲಕ ಮತಹಾಕುವ ಬಗ್ಗೆ ತಾಂತ್ರಿಕ ವ್ಯವಸ್ಥೆ ಅಭಿವೃದ್ಧಿಗೆ ಈಗಾಗಲೇ ಸಮಾಲೋಚನೆ

 

Advertisement

Udayavani is now on Telegram. Click here to join our channel and stay updated with the latest news.

Next