Advertisement

Indo-Pak‌ ಪಂದ್ಯದ ನಕಲಿ ಟಿಕೆಟ್‌ ಮಾರಾಟ ಮಾಡಿ 3 ಲಕ್ಷ ಗಳಿಕೆ; ನಾಲ್ವರ ಬಂಧನ

10:42 AM Oct 12, 2023 | Suhan S |

ಅಹಮದಾಬಾದ್: ಭಾರತ – ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ನಕಲಿ ಟಿಕೆಟ್‌ ನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಗಳನ್ನು ಜೈಮಿನ್ ಪ್ರಜಾಪತಿ(18) ಧ್ರುಮಿಲ್ ಠಾಕೋರ್(18) ಮತ್ತು ರಾಜವೀರ್ ಠಾಕೋರ್ (18), ಕುಶ್ ಮೀನಾ (21) ಎಂದು ಗುರುತಿಸಲಾಗಿದೆ. ಇವರೆಲ್ಲ ಅಹಮದಾಬಾದ್ ,ಗಾಂಧಿನಗರದ ವಿವಿಧ ಭಾಗಗಳ ನಿವಾಸಿಗಳೆಂದು ಪೊಲೀಸರು ಹೇಳಿದ್ದಾರೆ.

ಘಟನೆ ಹಿನ್ನೆಲೆ:  ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್‌ನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರೋಪಿಗಳು ಮೊದಲು ಪಂದ್ಯದ ಟಿಕೆಟ್‌ ನ್ನು ಖರೀದಿಸಿದ್ದಾರೆ. ಆ ಬಳಿಕ ಮೂಲ ಟಿಕೆಟ್‌ ನ್ನು  ಆರೋಪಿಗಳಲ್ಲಿ ಒಬ್ಬನ ಅಂಗಡಿಯಲ್ಲಿ ಫೋಟೋಶಾಪ್ ಸಾಫ್ಟ್‌ವೇರ್ ಬಳಸಿ ಆ ಮೂಲ ಟಿಕೆಟ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಸುಮಾರು 200 ನಕಲಿ ಟಿಕೆಟ್‌ಗಳಾಗಿ ಮುದ್ರಿಸಲಾಗಿದೆ ಎಂದು ಅಹಮದಾಬಾದ್ ನಗರ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.

200 ಟಿಕೆಟ್‌ ಗಳಲ್ಲಿನ ಈಗಾಗಲೇ ಆರೋಪಿಗಳು ಸೋಶಿಯಲ್‌ ಮೀಡಿಯಾ ಬಳಸಿಕೊಂಡು 50 ಟಿಕೆಟ್‌ ಗಳನ್ನು ಮಾರಾಟ ಮಾಡಿದ್ದಾರೆ. 3 ಲಕ್ಷ ರೂಪಾಯಿಯನ್ನು ಇದರಿಂದ ಅವರು ಗಳಿಸಿದ್ದಾರೆ. 200 ನಕಲಿ ಟಿಕೆಟ್‌ ಸೇರಿ, ಮಾರಾಟವಾಧ 50 ಟಿಕೆಟ್‌ ಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿರುವುದಾಗಿ ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.

ಇದನ್ನೂ ಓದಿ: World Cup 2023; ಭಾರತ- ಅಫ್ಘಾನ್ ಪಂದ್ಯದ ವೇಳೆ ಮಾರಾಮಾರಿ; ವಿಡಿಯೋ ವೈರಲ್

Advertisement

ಭಾರತ – ಪಾಕಿಸ್ತಾನ ಪಂದ್ಯದ ಟಿಕೆಟ್‌ ಗೆ ಅಧಿಕ ಬೇಡಿಕೆ ಇರುವುದರಿಂದ, ಸ್ಟೇಡಿಯಂನ ಪಕ್ಕದಲ್ಲಿ ವಾಸಿಸುವ ಪ್ರಜಾಪತಿ ಈ ನಕಲಿ ಟಿಕೆಟ್ ಮಾರಾಟ ಮಾಡುವ ಪ್ಲ್ಯಾನ್‌ ಮಾಡಿದ್ದ. ಆ ಬಳಿಕ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ವಿರ್ ಮತ್ತು ಧ್ರುಮಿಲ್ ಅನ್ನು ಸಂಪರ್ಕಿಸಿದ್ದ. ನಂತರ ಬೋಡಕ್‌ದೇವ್ ಪ್ರದೇಶದಲ್ಲಿ ಮುದ್ರಣ(ಪ್ರಿಂಟಿಂಗ್) ಅಂಗಡಿಯನ್ನು ಹೊಂದಿರುವ ಮೀನಾ ಅವರಿಗೆ ತನ್ನ ಪ್ಲ್ಯಾನ್‌ ನ್ನು ಹೇಳಿದ್ದಾರೆ. ಮೀನಾ ಇದಕ್ಕೆ ಒಂದು ಒರಿಜಿನಲ್‌ ಟಿಕೆಟ್‌ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಒಂದು ಟಿಕೆಟ್‌ ಖರೀದಿಸಿ  ಆ ಬಳಿಕ ಅದನ್ನು ಸ್ಕ್ಯಾನ್‌ ಮಾಡಿ, ನಕಲಿ ಟಿಕೆಟ್‌ ಯನ್ನಾಗಿ ಮಾಡಿದ್ದಾರೆ.

ಈ ವಿಚಾರವನ್ನರಿತ ನಮ್ಮ ತಂದ ಮೀನಾ ಅವರ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿಂದ ನಕಲಿ ಟಿಕೆಟ್‌ಗಳು, ಪ್ರಿಂಟರ್, ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next