ಬಿಹಾರ: ಶುಕ್ರವಾರ ಮುಂಜಾನೆ ಅರಾರಿಯಾ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರನ್ನು ಮನೆಯಲ್ಲೇ ಗುಂಡಿಕ್ಕಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತನನ್ನು ವಿಮಲ್ ಯಾದವ್ ಎಂದು ಗುರುತಿಸಲಾಗಿದ್ದು, ದೈನಿಕ್ ಜಾಗರಣದಲ್ಲಿ ಉದ್ಯೋಗಿಯಾಗಿದ್ದರು. ರಾಣಿಗಂಜ್‌ನಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ನಾಲ್ವರು ಆತನ ಎದೆಗೆ ಗುಂಡು ಹಾರಿಸಿ ಶುಕ್ರವಾರ ಹತ್ಯೆಗೈದಿದ್ದರು.
ಈ ಕುರಿತು ಮಾತನಾಡಿದ ಹಿರಿಯ ಫಿಲೊಸ್ ಅಧಿಕಾರಿ ಬಿಮಲ್ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಂಟು ಮಂದಿ ಕೊಲೆ ಆರೋಪಿಗಳನ್ನು ಹೆಸರಿಸಲಾಗಿದ್ದು, ಈ ಪೈಕಿ ನಾಲ್ವರನ್ನು ಇಂದು ಮುಂಜಾನೆ ವಿಚಾರಣೆಗೊಳಪಡಿಸಲಾಗಿದೆ. ಆರೋಪಿಗಳು 2019 ರಲ್ಲಿ ವಿಮಲ್ ಯಾದವ್ ಅವರ ಸಹೋದರನನ್ನು ಸಹ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿ ಬಿಮಲ್ ಏಕೈಕ ಸಾಕ್ಷಿಯಾಗಿದ್ದರು ಮತ್ತು ಅವರ ಸಾಕ್ಷ್ಯವನ್ನು ನಾಶಪಡಿಸಲು ಈ ಹತ್ಯೆ ನಡೆಸಿದರೇ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.
ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ವಿಫಲವಾದ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಅರಾರಿಯಾದಲ್ಲಿ ನಡೆದ ಪತ್ರಕರ್ತನ ಹತ್ಯೆಯನ್ನು ಖಂಡಿಸಿದ ಮುಖ್ಯಮಂತ್ರಿ ನಿತೀಶ್, “ಸುದ್ದಿ ಬಂದ ನಂತರ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ನಾನು ಅಧಿಕಾರಿಗಳಿಗೆ ಆದೇಶಿಸಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: Jammu: ಗುಜುರಿ ಅಂಗಡಿಯಲ್ಲಿ ಭೀಕರ ಸ್ಫೋಟ, ಬಾಲಕ ಸೇರಿ 3 ಮಂದಿ ಮೃತ್ಯು, 11 ಮಂದಿಗೆ ಗಾಯ