Advertisement

ಸುಕ್ಮಾದಲ್ಲಿ ಭೀಕರ ಗುಂಡಿನ ಚಕಮಕಿ ; 4-6 ನಕ್ಸಲರ ಹತ್ಯೆ/ಗಂಭೀರ ಗಾಯ

09:48 PM Jul 29, 2023 | Team Udayavani |

ಸುಕ್ಮಾ(ಛತ್ತೀಸ್‌ಗಢ): ಜಿಲ್ಲೆಯಲ್ಲಿ ಶನಿವಾರ ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಯಾವುದೇ ಶವಗಳು ಪತ್ತೆಯಾಗದಿದ್ದರೂ ಕನಿಷ್ಠ ನಾಲ್ಕರಿಂದ ಆರು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭಾರಿ ಗುಂಡಿನ ಚಕಮಕಿ ಬಳಿಕ ಉಳಿದ ನಕ್ಸಲೀಯರು ಗಾಯಗೊಂಡ ಅಥವಾ ಹತ್ಯೆಗೀಡಾದವರನ್ನು ಅರಣ್ಯಕ್ಕೆ ಎಳೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಂತಗುಫಾ ಮತ್ತು ಕಿಸ್ತಾರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾವೋವಾದಿಗಳ ಭದ್ರಕೋಟೆಯಲ್ಲಿರುವ ಛೋಟೆಕೆಡ್ವಾಲ್ ಗ್ರಾಮದ ಅರಣ್ಯದಲ್ಲಿ ಶನಿವಾರ ಬೆಳಗ್ಗೆ ಭದ್ರತಾ ಸಿಬಂದಿ ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next