Advertisement

4.51 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಕ್ರಮ

12:46 PM Nov 11, 2019 | Team Udayavani |

ಕಾಗವಾಡ: ಜುಗೂಳ ಗ್ರಾಮದಲ್ಲಿ ಉಗಾರ, ಶಿರಗುಪ್ಪಿ, ಮಂಗಾವತಿ, ಜುಗೂಳ ಮಧ್ಯದ ಮಂಗಾವತಿ-ಜುಗೂಳ 2.5 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ರವಿವಾರ ಅನರ್ಹ ಶಾಸಕ ಶ್ರೀಮಂತ ಪಾಟೀಲ ಭೂಮಿಪೂಜೆ ನೆರವೇರಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ಮೊದಲು ನೀಡಿರುವ ಭರವಸೆಯಂತೆ 4.51 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.

ಇದೇ ರೀತಿ ಮರಗುಬಾಯಿ ದೇವಸ್ಥಾನ ಹತ್ತಿರ 5 ಲಕ್ಷ ರೂ. ವೆಚ್ಚದ ಸಮುದಾಯ ಭವನ,1008 ಆದಿನಾಥ ದಿಗಂಬರ ಜೈನ ಮಂದಿರ ಹತ್ತಿರ 20 ಲಕ್ಷ ರೂ. ವೆಚ್ಚದ ಸಮುದಾಯ ಭವನ, ಜುಗೂಳ ಗ್ರಾಮದ ಜಾಮಾ ಮಸೀದಿ ಹತ್ತಿರ ಸಮುದಾಯ ಮಂಟಪಕ್ಕೆ 25 ಕೋಟಿ, ದಲಿತರ ಓಣಿಯಲ್ಲಿ ಚರಂಡಿ ನಿರ್ಮಾಣಕ್ಕೆ 40 ಲಕ್ಷ, ಜುಗೂಳ-ಶೇಡಬಾಳ, ಜುಗೂಳ-ಕಾಗವಾಡ ಮಧ್ಯದ ರಸ್ತೆ ನಿರ್ಮಾಣಕ್ಕೆ 50 ಲಕ್ಷ ಹೀಗೆ 4.51 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ, ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ಸದಸ್ಯ ಸುರೇಶ ಆದುಕೆ, ಅರುಣ ಗಣೇಶವಾಡಿ, ಮಹಾವೀರ ಗಣೇಶವಾಡಿ, ದಾದಾ ಅಂಬಿ, ರವಿ ವಾಂಟೆ, ಜಿಪಂ ಅಭಿಯಂತರ್‌ ಅಪ್ಪಾಸಾಹೇಬ ಅವತಾಡೆ, ಗುತ್ತಿಗೆದಾರ ಭಾವುಸಾಹೇಬ ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next