ಬೆಂಗಳೂರು: ಪಿಂಚಣಿ ವ್ಯವಸ್ಥೆಯನ್ನು ಸುಧಾರಿಸಲೆಂದೇ ಆಧಾರ್ ಲಿಂಕ್ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ 4.18 ಲಕ್ಷ ಬೋಗಸ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸರಕಾರಕ್ಕೆ 504 ಕೋ.ರೂ. ಉಳಿತಾಯವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಾಜೇಶ್ ನಾೖಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಷ್ಟೋ ಕಡೆ ಮೃತಪಟ್ಟವರಿಗೂ ಪಿಂಚಣಿ ಹೋಗುತ್ತಿತ್ತು. ಒಬ್ಬರು ಮೂರು ಕಡೆ ಪಿಂಚಣಿ ಪಡೆಯುತ್ತಿದ್ದ ಪ್ರಕರಣಗಳೂ ಪತ್ತೆಯಾಗಿವೆ ಎಂದರು.
ಬ್ಯಾಂಕ್‌ಗಳ ವಿಲೀನದಿಂದಾಗಿ ಪಿಂಚಣಿ ಪಾವತಿ ವ್ಯತ್ಯಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿ ಬ್ಯಾಂಕ್‌ಗಳೊಂದಿಗೆ ಸಮನ್ವಯತೆ ಸಾಧಿಸಿ ಬದಲಾವಣೆಯಾದ ಖಾತೆ ಮಾಹಿತಿ ಸಂಗ್ರಹಿಸಿ ತಂತ್ರಾಂಶದಲ್ಲಿ ಅಳವಡಿಸಿ ಪಿಂಚಣಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ತರಂಗಗಳ ಮೂಲಕ ಪೋನ್ ಚಾರ್ಜ್ ಮಾಡುವ ತಂತ್ರಜ್ಞಾನ ಪರಿಚಯಿಸಲಿರುವ ಶಿಯೋಮಿ
ಬಂಟ್ವಾಳದಲ್ಲಿ ಹಲವಾರು ಮಂದಿಗೆ ಸರಕಾರದಿಂದ ಮಂಜೂರಾತಿ ಆದೇಶ ಸಿಕ್ಕಿದ್ದರೂ ಕೆಲವು ತಿಂಗಳುಗಳಿಂದ ಪಿಂಚಣಿ ಲಭ್ಯವಾಗಿಲ್ಲ ಎಂದು ಶಾಸಕ ರಾಜೇಶ್ ನಾೖಕ್ ಹೇಳಿದರು.