ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ರವಿವಾರ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ರವಿವಾರ ಮಧ್ಯಾಹ್ನ 1:24 ಕ್ಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಇಸ್ಲಾಮಾಬಾದ್‌ನಿಂದ ಪಶ್ಚಿಮಕ್ಕೆ 37 ಕಿಮೀ ದೂರದಲ್ಲಿದೆ ಮತ್ತು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿರುವುದಾಗಿ ವರದಿಯಾಗಿದೆ.
ಭೂಕಂಪನ ಸಂಭವಿಸಿದ ವೇಳೆ ಅಲ್ಲಿನ ನಿವಾಸಿಗಳು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 19, 2023 ರಂದು, 5.6 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಇಸ್ಲಾಮಾಬಾದ್ ಮತ್ತು ಖೈಬರ್-ಪಖ್ತುನ್ಖ್ವಾದ ವಿವಿಧ ಭಾಗಗಳಲ್ಲಿ ಕಂಪನಗಳು ಸಂಭವಿಸಿದ್ದವು. ಪೇಶಾವರ, ನೌಶೆರಾ, ಮರ್ದಾನ್, ಶಬ್ಖಾದರ್, ಸ್ವಾತ್, ಕೊಹತ್, ಸ್ವಾಬಿ, ಲೋವರ್ ದಿರ್, ಬನ್ನು, ಚಾರ್ಸದ್ದಾ ಮತ್ತು ಇತರ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ: ವಿಸ್ತರಿಸಲಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಭದ್ರತಾ ಸಿಬಂದಿ