Advertisement
ಮೆಲ್ಬರ್ನ್ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿಯೇ ಭಾರತಕ್ಕೆ ಸರಣಿ ಸಮಬಲಗೊಳಿಸುವ ಒಳ್ಳೆಯ ಅವಕಾಶ ಲಭಿಸಿತ್ತು. ಆಸ್ಟ್ರೇಲಿಯವನ್ನು 7 ವಿಕೆಟಿಗೆ 132 ರನ್ನಿಗೆ ಭಾರತ ನಿಯಂತ್ರಿಸಿತ್ತು. ಆದರೆ ಸತತ ಮಳೆಯಿಂದ ಪಂದ್ಯ ರದ್ದುಗೊಂಡ ಕಾರಣ ಭಾರತದ ಗೆಲುವಿನ ನಿರೀಕ್ಷೆ ಮಳೆಯಲ್ಲಿ ಕೊಚ್ಚಿಹೋಯಿತು.
ಭಾರತವು 2017ರ ಜುಲೈ ಬಳಿಕ ಆಡಿದ ಎಲ್ಲ ಟಿ20 ಅಂತಾರಾಷ್ಟ್ರೀಯ ಸರಣಿಗಳಲ್ಲಿ ಅಜೇಯ ಸಾಧನೆ ಮಾಡಿದೆ. ಕೆರಿಬಿಯನ್‌ನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ಗೆ ಶರಣಾದ ಬಳಿಕ ಭಾರತ ಆಡಿದ 27 ಪಂದ್ಯಗಳಲ್ಲಿ 20ರಲ್ಲಿ ಜಯ ಸಾಧಿಸಿದೆ. ಆಡಿದ ಏಳು ಸರಣಿಗಳಲ್ಲಿ ಜಯಭೇರಿ ಬಾರಿಸಿದೆ. ಇದರಲ್ಲಿ ಶ್ರೀಲಂಕಾದಲ್ಲಿ ನಡೆದ ನಿದಹಾಸ್ ಟ್ರೋಫಿಗಾಗಿ ನಡೆದ ತ್ರಿಕೋನ ಸರಣಿ ಮತ್ತು ಇಂಗ್ಲೆಂಡ್ ತಂಡವನ್ನು 2-1 ಅಂತರದಿಂದ ಸೋಲಿಸಿರುವುದು ಪ್ರಮುಖವಾದದ್ದು. 2016ರಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆಯೂ ಭಾರತ ಟಿ20 ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್ ಸಾಧನೆ ಮಾಡಿತ್ತು.
Related Articles
ಮೆಲ್ಬರ್ನ್ನಲ್ಲಿ ಆತಿಥೇಯ ತಂಡವನ್ನು ಕಟ್ಟಿಹಾಕದಂತೆ ಸಿಡ್ನಿಯಲ್ಲೂ ಉತ್ತಮ ದಾಳಿ ಸಂಘಟಿಸಲು ಭಾರತ ಯೋಚಿಸುತ್ತಿದೆ. ಅದಕ್ಕಾಗಿ ತಂಡದಲ್ಲಿ ಮಹತ್ತರ ಬದಲಾವಣೆ ಮಾಡದಿರಲು ಕೊಹ್ಲಿ ಬಯಸಿದ್ದಾರೆ. ತಂಡದ ಆಯ್ಕೆಯಲ್ಲೂ ಅವರು ಸ್ಥಿರತೆಯನ್ನು ಕಾಯ್ದುಕೊಂಡು ಬರುತ್ತಿರುವ ಕಾರಣ ಆಟಗಾರರಿಂದ ಉತ್ತಮ ನಿರ್ವಹಣೆ ಸಾಧ್ಯವಾಗಿದೆ. ಆಲ್‌ರೌಂಡರ್ ಆಗಿ ಕೃಣಾಲ್ ಪಾಂಡ್ಯ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಕಾರಣ ಪಾಂಡ್ಯ ಆಟವಾಡುವ ಬಳಗದಲ್ಲಿರುವುದು ಖಚಿತ. ಖಲೀಲ್ ಅಹ್ಮದ್ ಅವರನ್ನು ಹೊರಗಿಡುವ ನಿರೀಕ್ಷೆಯಿದೆ. ಉಳಿದಂತೆ ಯಾವುದೇ ಬದಲಾವಣೆ ಇಲ್ಲ ಇದೇ ವೇಳೆ ಆರನ್ ಫಿಂಚ್ ಬಳಗ ಭಾರತ ವಿರುದ್ಧ ಸರಣಿ ಗೆಲುವಿನ ಸನಿಹದಲ್ಲಿದೆ. ಗೆದ್ದರೆ ಅದು 2-0 ಅಂತರದಿಂದ ಸರಣಿ ತನ್ನದಾಗಿಸಿಕೊಳ್ಳಲಿದೆ. ಅಭ್ಯಾಸದ ವೇಳೆ ಗಾಯಗೊಂಡಿರುವ ಬಿಲ್ಲಿ ಸ್ಟಾನ್‌ಲೇಕ್ ಬದಲಿಗೆ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Advertisement
ಉಭಯ ತಂಡಗಳುಭಾರತ
ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್/ಯುಜುವೇಂದ್ರ ಚಾಹಲ್. ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಡಿ’ಆರ್ಕಿ ಶಾರ್ಟ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟಾಯಿನಿಸ್, ಬೆನ್ ಮೆಕ್‌ಡರ್ಮಟ್, ಅಲೆಕ್ಸ್ ಕ್ಯಾರೆ, ನಥನ್ ಕೌಲ್ಟರ್ ನೈಲ್/ ಮಿಚೆಲ್ ಸ್ಟಾರ್ಕ್, ಆ್ಯಂಡ್ರೂé ಟೈರ್, ಆ್ಯಡಂ ಝಂಪ, ಜಾಸನ್ ಬೆಹೆìನ್‌ಡಾಫ್.
ಪಂದ್ಯ ಆರಂಭ ಅಪರಾಹ್ನ 1.30 ಗಂಟೆ ಸ್ಟಾರ್ಕ್‌ಗೆ ಕರೆ
ಮೆಲ್ಬರ್ನ್ನಲ್ಲಿ ಟಾಸ್‌ಗೆ ಮೊದಲು ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡ ಬಿಲ್ಲಿ ಸ್ಟಾನ್‌ಲೇಕ್ ಅವರ ಬದಲಿಗೆ ಮಿಚೆಲ್ ಸ್ಟಾರ್ಕ್ ಅವರನ್ನು ಸೇರಿಸಿಕೊಂಡಿದೆ. ಸ್ಟಾರ್ಕ್ ಅವರು 2016ರ ಬಳಿಕ ಟ್ವೆಂಟಿ20 ಪಂದ್ಯ ಆಡಿಲ್ಲ. ತಂಡದಲ್ಲಿರುವ ಡಿ’ಆರ್ಕಿ ಶಾರ್ಟ್ ಈ ಋತುವಿನ ಮೂರು ಟಿ20 ಪಂದ್ಯಗಳಲ್ಲಿ ಒದ್ದಾಡಿದ್ದಾರೆ. ಒಟ್ಟಾರೆ 28 ಎಸೆತ ಎದುರಿಸಿ 21 ರನ್ ಗಳಿಸಿದ್ದಾರೆ. ಅಂಕಿ ಅಂಶ
ಸಿಡ್ನಿಯ ಈ ಮೈದಾನದಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಈ ಹಿಂದಿನ ಪಂದ್ಯ ಸ್ಮರಣೀಯವಾಗಿ ಸಾಗಿತ್ತು. 2016ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಗೆಲುವಿನ ಗುರಿಯಾದ 198 ರನ್ ಪೇರಿಸಿ ವಿಜಯಿಯಾಗಿತ್ತು. ಜಿಂಬಾಬ್ವೆಯಲ್ಲಿ ನಡೆದ ಟಿ20 ಸರಣಿ ಬಳಿಕ ಆಸ್ಟ್ರೇಲಿಯದ ಬ್ಯಾಟ್ಸ್‌ಮೆನ್ ಆಡಿದ ಏಳು ಪಂದ್ಯಗಳಲ್ಲಿ ಎರಡು ಅಧಶತಕ ಹೊಡೆದಿದ್ದಾರೆ. ಯುಎಇ ವಿರುದ್ಧ ಶಾರ್ಟ್ ಅಜೇಯ 68 ಮತ್ತು ಪಾಕಿಸ್ಥಾನ ವಿರುದ್ಧ ದುಬಾೖಯಲ್ಲಿ ಮ್ಯಾಕ್ಸ್‌ವೆಲ್ 52 ರನ್ ಹೊಡೆದಿದ್ದರು. ಸ್ಟಾರ್ಕ್ ತವರಿನಲ್ಲಿ ಈ ಹಿಂದೆ 2014ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯ ಆಡಿದ್ದರು.