Advertisement

Actor Akhil Mishra: ಅಡುಗೆ ಮನೆಯಲ್ಲಿ ಜಾರಿಬಿದ್ದು ಖ್ಯಾತ ಬಾಲಿವುಡ್ ನಟ ನಿಧನ

02:23 PM Sep 21, 2023 | Team Udayavani |

ಮುಂಬಯಿ: ಆಮಿರ್‌ ಖಾನ್‌ ಅಭಿನಯದ ʼಥ್ರೀ ಈಡಿಯಟ್ಸ್ʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಅಖಿಲ್ ಮಿಶ್ರಾ(58) ಗುರುವಾರ (ಸೆ.21 ರಂದು) ನಿಧನರಾಗಿದ್ದಾರೆ.

Advertisement

ನಟ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ʼಈಟಿ ಟೈಮ್ಸ್‌ʼ ವರದಿ ಮಾಡಿದೆ.

ಘಟನೆಯ ವೇಳೆ ಅವರ ಪತ್ನಿ ಸುಝೇನ್ ಬರ್ನರ್ಟ್ ಹೈದರಾಬಾದ್ ನಲ್ಲಿ ಶೂಟಿಂಗ್‌ ಕೆಲಸಕ್ಕೆಂದು ಹೋಗಿದ್ದರು. ಮಾಹಿತಿ ತಿಳಿದ ಕೂಡಲೇ ಅವರು ವಾಪಾಸ್‌ ಬಂದಿದ್ದಾರೆ. “ನನ್ನ ಗಂಡನಿಲ್ಲದೆ ಹೃದಯ ಒಡೆದು ಹೋಗಿದೆ” ಎಂದು ದುಃಖ ವ್ಯಕ್ತಪಡಿಸಿರುವುದಾಗಿ ಈಟಿ ಟೈಮ್ಸ್‌ ವರದಿ ತಿಳಿಸಿದೆ.

ಸಿನಿಮಾರಂಗದತ್ತ ಗಮನಹರಿಸಿದರೆ ಅಖಿಲ್‌ ಅವರು,’ಡಾನ್’, ‘ಗಾಂಧಿ ಮೈ ಫಾದರ್’, ‘ಶಿಖರ್’ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ‘3 ಈಡಿಯಟ್ಸ್’ ಸಿನಿಮಾದಲ್ಲಿನ ಅವರ ಗ್ರಂಥಪಾಲಕ ದುಬೆಯ ಪಾತ್ರ ಹೆಚ್ಚು ಗಮನ ಸೆಳೆದಿತ್ತು.

ಸಿನಿಮಾ ಮಾತ್ರವಲ್ಲದೆ ಅವರು, ‘ಉತ್ತರನ್’, ‘ಉದಾನ್’, ‘ಸಿಐಡಿ’, ‘ಶ್ರೀಮಾನ್ ಶ್ರೀಮತಿ’, ‘ಹಾತಿಮ್’ ಮುಂತಾದ ಧಾರಾವಾಹಿಗಳಲ್ಲೂ ನಟಿಸಿದ್ದರು.

Advertisement

ಅಖಿಲ್ ಫೆಬ್ರವರಿ 3, 2009 ರಂದು ಜರ್ಮನ್ ನಟಿ ಸುಝೇನ್ ಬರ್ನರ್ಟ್ ಅವರನ್ನು ವಿವಾಹವಾಗಿದ್ದರು. ನಂತರ ಅವರು ಸೆಪ್ಟೆಂಬರ್ 30, 2011 ರಂದು ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next