Advertisement

2019ಕ್ಕೆ 3ಜಿ ಇವಿಎಂ: ಮತಯಂತ್ರಗಳಲ್ಲಿ ಅಕ್ರಮ ತಡೆಗೆ ತಂತ್ರಜ್ಞಾನ

03:45 AM Jul 06, 2017 | Harsha Rao |

ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ಚುನಾವಣೆ ವೇಳೆ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿಯೇ 2019ರಲ್ಲಿ ನಡೆಯವ  ಲೋಕಸಭೆ ಚುನಾವಣೆಯಲ್ಲಿ ಮತ ಯಂತ್ರವನ್ನು ತಿರುಚಿದರೆ ಗುರುತು ಹಿಡಿಯುಂಥ ವ್ಯವಸ್ಥೆ ಇರುವ “ಎಂ3′ ಮಾದರಿಯ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಬಳಕೆ ಮಾಡಲು ನಿರ್ಧರಿದೆ. 

Advertisement

ಹಾಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಬುಧವಾರ ಈ ಮಾಹಿತಿ ನೀಡಿದ್ದಾರೆ. “ಇವಿಎಂಗಳ ಸುಧಾರಣೆಗೆ ಕೇಂದ್ರ ಚುನಾವಣಾ ಆಯೋಗ ಯಾವತ್ತೂ ಸಲಹೆಗಳನ್ನು ಸ್ವಾಗತಿಸುತ್ತದೆ. ಅವುಗಳ ಫ‌ಲವಾಗಿಯೇ ತಿರುಚುವಿಕೆಯನ್ನು ತಡೆಯುವಂಥ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಸದ್ಯ ನಾವು ತೃತೀಯ ತಲೆಮಾರಿನ (ಎಂ3) ಇವಿಎಂಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಜನಸಾಮಾನ್ಯರ ಬಾಷೆ ಯಲ್ಲಿಯೇ ಹೇಳುವುದಾದರೆ ಅದು ತಿರುಚಲು ಸಾಧ್ಯ ವಿಲ್ಲದ್ದು. ಅದನ್ನು ಸೂð ಅಥವಾ ಇನ್ನಿತರ ಯಾವುದೇ ವಸ್ತುವಿನಿಂದ ತೆರೆಯಲು ಪ್ರಯತ್ನಿಸಿದರೆ ಇವಿಎಂ ಕಾರ್ಯ ನಿರ್ವಹಿಸುವುದಿಲ್ಲ,’ಎಂದು  ಜೈದಿ ಹೇಳಿದ್ದಾರೆ.

ಈ ಆರೋಪಗಳ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಇವಿಎಂಗಳನ್ನು ಹ್ಯಾಕ್‌ ಮಾಡಿ ಎಂದು ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದ್ದಾಗ ಯಾವೊಂದು ಪಕ್ಷವೂ ಮುಂದೆ ಬಂದಿರಲಿಲ್ಲ.

ಬೆಂಗಳೂರಿನಲ್ಲಿ ಶುರು: ಮುಂದಿನ ತಿಂಗಳಿನಿಂದ ಹೊಸ ಮಾದರಿಯ ಇವಿಎಂಗಳ ಉತ್ಪಾದನೆ ಶುರುವಾಗಲಿದೆ. ಬೆಂಗಳೂರಿನಲ್ಲಿರುವ ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌), ಇಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಲಿಮಿಟೆಡ್‌ (ಇಸಿಐಎಲ್‌)ನಲ್ಲಿ ಅವುಗಳ ಉತ್ಪಾದನೆ ಆರಂಭವಾಗುತ್ತದೆ. ಮುಂದಿನ ವರ್ಷದ ಸೆಪ್ಟೆಂಬರ್‌ಗೆ ಅಗತ್ಯವಿರುವ ಇವಿಎಂಗಳ ಉತ್ಪಾದನೆ ಮುಕ್ತಾಯವಾಗಲಿದೆ.

ಅತ್ಯಾಧುನಿಕ ತಂತ್ರಜ್ಞಾನ: ಹೊಸ ವ್ಯವಸ್ಥೆಯಲ್ಲಿ ಮತ ದೃಢೀಕರಣ (ವಿವಿಪ್ಯಾಟ್‌) ಕೂಡ ಇರಲಿದೆ. ಹೊಸ ಮಾದರಿಯ ವಿಶೇಷತೆ ಏನೆಂದರೆ ತಿರುಚುವಂಥ ಪ್ರಯತ್ನದ ಬಗ್ಗೆ ಅದುವೇ ಸ್ವಯಂಚಾಲಿತವಾಗಿ ಪತ್ತೆ ಹಚ್ಚುತ್ತದೆ. ಕಂಟ್ರೋಲ್‌ ಯುನಿಟ್‌ ಮತ್ತು ಮತ ಹಾಕುವ ವಿಭಾಗಕ್ಕೆ ಸಂಪರ್ಕ ಇರುವಂಥ ವ್ಯವಸ್ಥೆ ಅಳವಡಿಸಲಾಗಿದೆ. ಯಾರಾದರೂ ಹೊರಗಿನಿಂದ ಮತ ಹಾಕಲು ಯತ್ನಿಸಿದರೆ ಅದರಲ್ಲಿರುವ ಡಿಜಿಟಲ್‌ ಸಹಿ ಹೊಂದಾಣಿಕೆಯಾಗದು. ಹೀಗಾಗಿ ಅದು ಕೂಡಲೇ ಕಾರ್ಯವೆಸಗುವುದನ್ನು ನಿಲ್ಲಿಸುತ್ತದೆ.  ಅದರ ಸಾಗಣೆ, ಉತ್ಪಾದನೆ, ಸಂಗ್ರಹಿಸಿ ಇಡುವಂಥ ವ್ಯವಸ್ಥೆಯನ್ನೂ ಮತ್ತಷ್ಟು ಬಲಪಡಿಸಲಾಗಿದೆ. ಇವಿಎಂಗಳನ್ನು ಸಾಗಣೆ ಮಾಡುವ ವಾಹನಗಳನ್ನು ಜಿಪಿಎಸ್‌ ಮೂಲಕ ಗಮನಿಸಲಾಗುತ್ತದೆ ಎಂದು ಜೈದಿ ಹೇಳಿದ್ದಾರೆ. 

Advertisement

ಸಾರ್ವಜನಿಕರಿಗೆ ಮಾಹಿತಿ: ಹೊಸ ಮಾದರಿಯ ಮತ ಯಂತ್ರಗಳು ಬರುವುದರಿಂದ ಕೇಂದ್ರ ಚುನಾವಣಾ ಆಯೋಗದ ವತಿಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದಿದ್ದಾರೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಆಯೋಗ ಈ ವ್ಯವಸ್ಥೆ ಮಾಡಲಿದೆ ಎಂದಿದ್ದಾರೆ.

ಅಧಿಕಾರದ ಕೊನೆಯ ದಿನ: ಅಂದ ಹಾಗೆ ನಸೀಂ ಜೈದಿ ಅವರ ಅಧಿಕಾರದ ಕೊನೆಯ ದಿನ ಬುಧವಾರ. ಈಗಾಗಲೇ ಗುಜರಾತ್‌ ಕೇಡರ್‌ನ ಐಎಎಸ್‌ ಅಧಿಕಾರಿ ಅಚಲ್‌ ಕುಮಾರ್‌ ಜೋತಿ ಮುಖ್ಯ ಚುನಾವಣಾ ಆಯುಕ್ತರಾಗಿ ಗುರುವಾರ ಅಧಿಕಾರ ವಹಿಸಲಿದ್ದಾರೆ.

ಇ.ಸಿ.ಗಳ ನೇಮಕಕ್ಕೆ ಏಕಿಲ್ಲ ಪ್ರತ್ಯೇಕ ಕಾನೂನು?: ಸುಪ್ರೀಂ
ದೇಶದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು, ಚುನಾವಣಾ ಸಮಿತಿ ರಚನೆಗೆ ಸೀಮಿತವಾದ ಪ್ರತ್ಯೇಕ ಕಾನೂನನ್ನು ಏಕೆ ಜಾರಿಗೆ ತಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. 
ಸಂವಿಧಾನದ  324ನೇ ಕಲಂ ಅನ್ವಯ ಮುಖ್ಯ ಚುನಾವಣಾ ಆಯುಕ್ತಕರು ಮತ್ತು ಆಯುಕ್ತರನ್ನು ಕಾನೂನು ಪ್ರಕಾರ ಆಯ್ಕೆ ಮಾಡಬಹುದು. ಆದರೆ ಅಂತಹ ಕಾನೂನನ್ನೇ ತರಲಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ. ಜೆ.ಎಸ್‌.ಖೇಹರ್‌ ಮತ್ತು ನ್ಯಾ. ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಹೇಳಿದೆ. ಆದಾಗ್ಯೂ ಈವರೆಗೆ ಉತ್ತಮ ಆಯುಕ್ತರನ್ನೇ ನೇಮಿಸಲಾಗಿದೆ ಎಂದು ಸುಪ್ರೀಂ ಸಮಾಧಾನ ವ್ಯಕ್ತಪಡಿಸಿದೆ. 

ಮುಖ್ಯ ಚುನಾವಣಾ ಆಯುಕ್ತರು, ಆಯುಕ್ತರು ಮತ್ತು ಚುನಾವಣಾ ಸಮಿತಿಗಳನ್ನು ನೇಮಿಸುವಾಗ ಪಾರದರ್ಶಕತೆ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ನೇಮಿಸಬೇಕು. ಉನ್ನತ ನ್ಯಾಯಾ ಲಯಗಳ ನ್ಯಾಯಾಧೀಶರನ್ನು ನೇಮಿಸುವಂತೆ ನೇಮಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ಯನ್ನು ಸಲ್ಲಿಸಲಾಗಿತ್ತು. ಇದರ ಕುರಿತ ವಿಚಾರಣೆ ವೇಳೆ ಸುಪ್ರೀಂ ಹೀಗೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next