Advertisement
ಹೌದು, “ವರ್ಚ್ಯುಯೆಲ್ ರಿಯಾಲಿಟಿ’ ತಂತ್ರಜ್ಞಾನ ಮೂಲಕ ನೀವು ಎಲ್ಲಿದ್ದರೂ ಅಲ್ಲಿಂದಲೇ ಮೊಬೈಲ್ ಆನ್ ಮಾಡಿ ವಿಧಾನಸೌಧ ವಜ್ರಮಹೋತ್ಸವ ವೀಕ್ಷಿಸಬಹುದು. ಮೊಬೈಲ್ ಕೈಯಲ್ಲಿ ಹಿಡಿದರೆ ನೀವು ಅದೇ ಜಾಗದಲ್ಲಿದ್ದಂತೆ ಭಾಸವಾಗಲಿದೆ.
Related Articles
ಅಲ್ಲದೆ ರಾಷ್ಟ್ರಪತಿಯವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಿರುವ ಭಾಷಣ ಸಹ ವರ್ಚ್ಯುಯೆಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ವೀಕ್ಷಿಸಬಹುದಾಗಿದೆ.
Advertisement
ಸಾಕ್ಷ್ಯಚಿತ್ರ ಪ್ರದರ್ಶನ: ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ “ವಿಧಾನಸೌಧ ಕಟ್ಟಡ ನಿರ್ಮಾಣ’ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವೂ ಅ.26ರಂದು ನಡೆಯಲಿದೆ. ಟಿ.ಎನ್.ಸೀತಾರಾಂ ನಿರ್ದೇಶನದ “ಕರ್ನಾಟಕ ವಿಧಾನಮಂಡಲ ನಡೆದು ಬಂದ ಹಾದಿ’ ಕುರಿತು ಸಾಕ್ಷ್ಯಚಿತ್ರವು ರಾಜ್ಯವನ್ನಾಳಿದ ನಾಯಕರು, ಅವರು ಕೈಗೊಂಡ ಐತಿಹಾಸಿಕ ನಿರ್ಣಯಗಳನ್ನೊಳಗೊಂಡಿರುತ್ತದೆ.
ವಿಧಾನಸೌಧ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಕಲೆ ಪರಂಪರೆ ಸಾಹಿತ್ಯ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭದ ಮತ್ತೂಂದು ವಿಶೇಷ.
ಈಗಾಗಲೇ ವಾರ್ತಾ ಇಲಾಖೆ ವಜ್ರಮಹೋತ್ಸವ ಕುರಿತು 70 ಸೆಕೆಂಡ್‌ಗಳ ಕಿರುಚಿತ್ರ ಸಹ ನಿರ್ಮಿಸಿದೆ.
ಅ.26 ರಂದು ರಾತ್ರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿಕೇಜ್ ರಾಜ್ಯದ ಜೀವರಾಶಿ, ಪ್ರಕೃತಿ ವೈವಿದ್ಯತೆಯ ಸೊಬಗಿನ ಸುಂದರ ಚಿತ್ರಣದ “ಶಾಂತಿ ಸಂಸಾರ’ ಸಂಗೀತ ಕಾರ್ಯಕ್ರಮ ಸಹ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನೀಡಲಿದ್ದಾರೆ.
– ಎಸ್.ಲಕ್ಷ್ಮಿನಾರಾಯಣ