Advertisement
ರಾಜ್ಯದಲ್ಲಿ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸುಮಾರು 834 ಸ್ಮಾರಕಗಳು ಬರುತ್ತವೆ. ಅವುಗಳಲ್ಲಿ ಮೈಸೂರು ವಿಭಾಗ-125, ಬೆಂಗಳೂರು ವಿಭಾಗ-105, ಬೆಳಗಾವಿ ವಿಭಾಗ-365 ಹಾಗೂ ಕಲುಬುರಗಿ ವಿಭಾಗ- 249 ಸ್ಮಾರಕಗಳಿದ್ದು ಇವುಗಳಲ್ಲಿ ಬಹುತೇಕ ಸ್ಮಾರಕಗಳ ತ್ರೀಡಿ ಮ್ಯಾಪಿಂಗ್ ಹಾಗೂ ಲೇಸರ್ ಸ್ಕ್ಯಾನಿಂಗ್ ಕಾರ್ಯ ಮುಗಿದಿದೆ. ಮೈಸೂರು ಹಾಗೂ ಬೆಂಗಳೂರು ವಿಭಾಗದಲ್ಲಿ ಕೆಲವು ಸ್ಮಾರಕಗಳು ಮಾತ್ರ ಬಾಕಿ ಇದ್ದು, ಅದು ಸ್ವಲ್ಪ ದಿನದಲ್ಲಿ ಪೂರ್ಣಗೊಳ್ಳಲಿದೆ.
ಪ್ರಸ್ತುತ ಲಭ್ಯವಿರುವ ಆಧುನಿಕ ತಂತ್ರಜ್ಞಾನ ವನ್ನು ಬಳಕೆ ಮಾಡಿ ಕೊಂಡು ಸ್ಮಾರಕಗಳನ್ನು ತ್ರೀಡಿ ಮ್ಯಾಪಿಂಗ್ ಹಾಗೂ ಲೇಸರ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಸ್ಮಾರಕಗಳ ಶೈಲಿ, ಅವುಗಳ ಅಳತೆ, ಆಯಾ, ತಳಪಾಯದ ನಿರ್ಮಾಣ ವಿನ್ಯಾಸ, ಕಟ್ಟಡಕ್ಕೆ ಬಳಕೆಯಾಗಿರುವ ಸಾಮಗ್ರಿಗಳು ಅಂದರೆ ಮಣ್ಣು, ಕಲ್ಲು, ಇಟ್ಟಿಗೆ, ಗಾರೆ, ಸ್ಮಾರ ಕವು ಯಾವ ರಾಜ-ಪಾಳೇಗಾರರರ ಕಾಲದಲ್ಲಿ ನಿಮಾರ್ಣವಾಯಿತು, ಅವರ ಅವಧಿ, ಆ ವಂಶದ ಪರಂಪರೆ, ಪರಿಸರದ ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸಲಾಗುತ್ತಿದೆ. ಒಟ್ಟು 33 ಪ್ರಾಥಮಿಕ ದತ್ತಾಂಶಗಳನ್ನು ಕಲೆ ಹಾಕಿ, ಬೆಂಗಳೂರಿನಲ್ಲಿ ಇರುವ ಪ್ರಯೋಗಾಲಯಕ್ಕೆ ತಗೆದುಕೊಂಡು ಹೋಗಿ ವಿಶ್ಲೇಷಿಸಿ, ಅದಕ್ಕೊಂದು ಡಿಜಿಟಿಲ್ ನಮೂನೆ ಯನ್ನು ಸಿದ್ಧಗೊಳಿಸಲಾಗುತ್ತದೆ.
Related Articles
ಆಧುನಿಕ ಕಟ್ಟಡ ಗಳನ್ನು ನಿರ್ಮಿಸುವಾಗ ವಾಸ್ತು ಶಿಲ್ಪಿಗಳು ತ್ರೀಡಿ ಮಾಡೆ ಲಿಂಗ್ ಮೂಲಕ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗುತ್ತದೆ. ಅದೇ ರೀತಿ ಈ ಸ್ಮಾರಕಗಳಿಗೆ ಭವಿಷ್ಯದಲ್ಲಿ ಧಕ್ಕೆ ಉಂಟಾದ ಸಂದರ್ಭದಲ್ಲಿ ಅವುಗಳನ್ನು ಪುನರುಜ್ಜೀವಗೊಳಿಸಲು ಆ ಸ್ಮಾರಕದ ಶೈಲಿ ಮೊದಲು ಹೇಗಿತ್ತು ಎನ್ನುವ ವಿಚಾರ ಗಳನ್ನು ಕಲೆ ಹಾಕಬೇಕಾದರೆ ಹಲವು ತಿಂಗಳುಗಳೇ ಬೇಕಾಗುತ್ತದೆ. ಆದರೆ ಇಲಾ ಖೆ ಮಾಡಿ ರುವ ಈ ಕಾರ್ಯದಿಂದ ಕುಳಿತಲ್ಲೇ ಎಲ್ಲ ಮಾಹಿತಿ ದೊರೆ ಯುತ್ತದೆ. ಸ್ಮಾರಕಗಳ ನವೀಕರಣ, ಪುನರು ಜ್ಜೀವ ಕಾರ್ಯವೂ ಸುಗಮ ವಾಗುತ್ತದೆ.
Advertisement
ದೇಶದಲ್ಲೇ ಮೊದಲುದೇಶದಲ್ಲಿ ಸ್ಮಾರಕಗಳನ್ನು ತ್ರೀಡಿ ಮ್ಯಾಪಿಂಗ್ ಹಾಗೂ ಲೇಸರ್ ಸ್ಕ್ಯಾನಿಂಗ್ ಮಾಡುತ್ತಿರುವುದು ಕರ್ನಾಟಕದಲ್ಲೇ ಮೊದಲು. ಇದೊಂದು ಪೈಲೆಟ್ ಯೋಜನೆಯಾಗಿದ್ದು, ಮೊದಲಿಗೆ ಡಿಜಿ ಟಲ್ ರೂಪದಲ್ಲಿ ಸಂಪೂರ್ಣ ವಿವರ ಗಳನ್ನು ಒಳಗೊಂಡ 10 ಸ್ಮಾರಕಗಳ ಎಐ ತ್ರೀಡಿ ಮಾಡೆಲ್ ಅನ್ನು ವೆಬ್‌ಸೈಟ್‌ನಲ್ಲಿ ವಾಕ್ ತ್ರೋಗೆ ಬಿಡುಗಡೆ ಮಾಡಲಾಗುತ್ತದೆ. ಇದರ ಪ್ರತಿಕ್ರಿಯೆಯನ್ನು ನೋಡಿಕೊಂಡು ಉಳಿದ ಸ್ಮಾರಕಗಳ ವಿವರಗಳನ್ನು ವೆಬ್‌ಸೈಟ್‌ಗೆ ಭರ್ತಿ ಮಾಡ ಲಾಗುತ್ತದೆ ಎಂದು ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ಆಯುಕ್ತ ಎ.ದೇವರಾಜು ಅವರು “ಉದಯವಾಣಿ’ಗೆ ತಿಳಿಸಿದರು. -ಆರ್.ವೀರೇಂದ್ರ ಪ್ರಸಾದ್