ನವದೆಹಲಿ: 2022 ರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು. 50 ನಗರಗಳಲ್ಲಿ 39 ನಗರಗಳು ಭಾರತದಲ್ಲೇ ಇವೆಎಂದು ಅಂಕಿ ಅಂಶಬಿಡುಗಡೆ ಮಾಡಿದೆ
ಇತ್ತೀಚಿನ ವರದಿಯ ಪ್ರಕಾರ, ಭಾರತವು ವಿಶ್ವದ ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದೆ, ಆದರೆ 2021 ರಲ್ಲಿ ದೇಶವು ಐದನೇ ಸ್ಥಾನದಲ್ಲಿದ್ದು ಕೊಂಚ ಸುಧಾರಣೆಯಾಗಿದೆ ಎನ್ನಬಹುದಾಗಿದೆ.
ಮೊದಲ ಹತ್ತು ಅತ್ಯಂತ ಕಲುಷಿತ ದೇಶಗಳೆಂದರೆ:
1, ಚಾಡ್
Related Articles
2, ಇರಾಕ್
3, ಪಾಕಿಸ್ತಾನ
4, ಬಹ್ರೇನ್
5, ಬಾಂಗ್ಲಾದೇಶ
6, ಬುರ್ಕಿನಾ ಫಾಸೊ
7, ಕುವೈತ್
8, ಭಾರತ
9, ಈಜಿಪ್ಟ್
10, ತಜಿಕಿಸ್ತಾನ್
ಮಂಗಳವಾರ ಸ್ವಿಸ್‌ನ ಐಕ್ಯುಏರ್ ಸಂಸ್ಥೆ ಬಿಡುಗಡೆ ಮಾಡಿದ ‘ವಿಶ್ವ ವಾಯು ಗುಣಮಟ್ಟ ವರದಿ’ಯಲ್ಲಿ ಮಾಲಿನ್ಯ ಮಾಪಕ ‘ಪಿಎಂ 2.5’ ಮಟ್ಟವು ಸ್ವಲ್ಪ ಕುಸಿದಿದೆ. ಆದಾಗ್ಯೂ ಭಾರತದಲ್ಲಿನ ಗಾಳಿಯು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು ಅಪಾಯದಲ್ಲಿದೆ ಎನ್ನಲಾಗಿದೆ.
ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದೆ, ಬಹಳ ಮುಖ್ಯ ಅಂಶವೇನೆಂದರೆ ಕಲುಷಿತ ನಗರಗಳ ಪಟ್ಟಿಯಲ್ಲಿ ಚೆನ್ನೈ ಹೆಸರು ಸೇರಿಲ್ಲ, ಅಂದರೆ ಚೆನೈ ಯಲ್ಲಿ ಮಾಲಿನ್ಯ ಪ್ರಮಾಣ ಬಹಳ ಇಳಿಕೆಯಾಗಿದೆ ಎಂದು ಹೇಳಲಾಗಿದೆ .
ಅಷ್ಟುಮಾತ್ರವಲ್ಲದೆ ರಾಜಸ್ಥಾನದ ಭಿವಾಡಿ, ಮುಂಬೈ, ಪುಣೆ ಸೇರಿದಂತೆ ಹಲವು ನಗರಗಳು ಕಲುಷಿತ ನಗರಗಳ ಪಟ್ಟಿಯಲ್ಲಿ ಸೇರಿಕೊಂಡಿವೆ ಎನ್ನಲಾಗಿದೆ.
ಇದನ್ನೂ ಓದಿ: ಲಾಹೋರ್ ನಲ್ಲಿನ ನಿವಾಸದತ್ತ ಪೊಲೀಸ್, ಸೇನೆ ದೌಡು; ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಬಂಧನ?