Advertisement

ಉತ್ತರ ಪ್ರದೇಶದಲ್ಲಿ ಪತ್ತೆಯಾದ 3,800 ವರ್ಷ ಹಳೇ ಸ್ಮಶಾನ!

10:17 AM Feb 23, 2020 | sudhir |

– ಕಾರ್ಬನ್‌ ಡೇಟಿಂಗ್‌ ತಂತ್ರಜ್ಞಾನದಿಂದ ಕಾಲದ ಕರಾರುವಾಕ್‌ ಪತ್ತೆ
– ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ತಜ್ಞರಿಂದ ಪ್ರಕಟಣೆ
– ದೆಹಲಿಯಿಂದ 68 ಕಿ.ಮೀ. ದೂರದ ಬಾಗ್‌ಪತ್‌ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಸ್ಮಶಾನ
– 2005ರಲ್ಲಿ ಮೊದಲು ಭಾಗಶಃ ಉತ್ಖನನಗೊಂಡಿದ್ದ ರುದ್ರಭೂಮಿ

Advertisement

ನವದೆಹಲಿ: ಉತ್ತರ ಪ್ರದೇಶದಲ್ಲಿ 2005ರಿಂದೀಚೆಗೆ ಹಂತಹಂತವಾಗಿ ಉತ್ಖನನದ ಮೂಲಕ ಪತ್ತೆಯಾದ ವಿಶಾಲವಾದ ಸ್ಮಶಾನ 3,800 ವರ್ಷಗಳಷ್ಟು ಹಿಂದಿನದ್ದಾಗಿದ್ದು, ಕಾರ್ಬನ್‌ ಡೇಟಿಂಗ್‌ ತಂತ್ರಜ್ಞಾನದಿಂದ ಇದರ ಕಾಲವನ್ನು ಅಳೆಯಲಾಗಿದೆ ಎಂದು ಭಾತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ (ಎಎಸ್‌ಐ) ತಜ್ಞರು ಹೇಳಿದ್ದಾರೆ.

ದೆಹಲಿಯಿಂದ ಕೇವಲ 68 ಕಿ.ಮೀ. ದೂರವಿರುವ ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಗೆ ಸೇರಿದ ಸನೌಲಿಯ ಬಳಿಯಿರುವ ಈ ಸ್ಮಶಾನದ ಒಂದು ಭಾಗ ಉತ್ಖನನದ ವೇಳೆ 2005ರಲ್ಲಿ ಮೊದಲ ಬಾರಿಗೆ ಗೋಚರಿಸಿತ್ತು.

ಆನಂತರ, 2018ರಲ್ಲಿ ಉತ್ಖನನವನ್ನು ಪುನರಾರಂಭಿಸಿದಾಗ ಭೂಗರ್ಭದಲ್ಲಿ 120 ಸಮಾಧಿಗಳು ಪತ್ತೆಯಾಗಿದ್ದವು.

ಪ್ರತಿಯೊಂದು ಸಮಾಧಿಗೂ ಒಂದೊಂದು ಪುಟ್ಟ ಕೋಣೆಯನ್ನು ಕಟ್ಟಲಾಗಿದ್ದು, ಅದರಲ್ಲಿ ಅಲಂಕೃತ ಕಾಲುಗಳುಳ್ಳ ಶವಪೆಟ್ಟಿಗೆಗಳಲ್ಲಿ ಶವ ಹಾಗೂ ಅಕ್ಕಿ ಮುಂತಾದ ವಸ್ತುಗಳನ್ನು ಇಟ್ಟು ಮಣ್ಣು ಮಾಡಲಾಗಿರುವುದು ಅವುಗಳ ಅಧ್ಯಯನದಿಂದ ತಿಳಿದುಬಂದಿತ್ತು.

Advertisement

ಇದು ಆ ಪ್ರಾಂತ್ಯದಲ್ಲಿ ಶತಮಾನಗಳ ಹಿಂದೆ ಇದ್ದ ಬುಡಕಟ್ಟು ಸಮುದಾಯದ ಸಮಾಧಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ಸ್ಮಶಾನದ ಜೊತೆಗೆ, ಮಣ್ಣಿನಿಂದ ಮಾಡಿದ ಮಡಕೆ ಮತ್ತಿತರ ಮನೆ ಬಳಕೆ ವಸ್ತುಗಳು, ಕುದುರೆ ಗಾಡಿ, ನಾಲ್ಕು ಕಾಲುಗಳುಳ್ಳ ಶವಪೆಟ್ಟಿಗೆಗಳು, ತಾಮ್ರದ ಒಂದು ಕತ್ತಿ, ಗುರಾಣಿಗಳು ಸಿಕ್ಕಿವೆ.

Advertisement

Udayavani is now on Telegram. Click here to join our channel and stay updated with the latest news.

Next