Advertisement

Indian-origin man: ಲಂಡನ್ ನಲ್ಲಿ ಮತ್ತೊಬ್ಬ ಭಾರತೀಯನ ಕೊಲೆ: 3 ದಿನದಲ್ಲಿ ಎರಡನೇ ಘಟನೆ

12:22 PM Jun 18, 2023 | Team Udayavani |

ಲಂಡನ್:‌  ಕೆಲ ದಿನಗಳ ಹಿಂದಷ್ಟೇ ಹೈದರಬಾದ್‌ನ 27 ವರ್ಷದ ಮಹಿಳೆಯನ್ನು ಚೂರಿಯಲ್ಲಿ ಇರಿದು ಕೊಲೆ ಮಾಡಿರುವ ಘಟನೆ ಲಂಡನ್‌ನಲ್ಲಿ ನಡೆದಿತ್ತು. ಇದೀಗ ಲಂಡನ್‌ ನಲ್ಲಿ ಮತ್ತೆ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

Advertisement

ಕ್ಯಾಂಬರ್‌ವೆಲ್‌ನ ಸೌತಾಂಪ್ಟನ್ ವೇನಲ್ಲಿ ಭಾರತೀಯ ಮೂಲದ ಅರವಿಂದ್ ಶಶಿಕುಮಾರ್ (38) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಶುಕ್ರವಾರ ನಸುಕಿನ 1:30 ರ ವೇಳೆಗೆ ಶಶಿಕುಮಾರ್‌ ಮೃತಪಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ  ಸಲ್ಮಾನ್ ಸಲೀಂ (25) ಎಂಬಾತನನ್ನು ಬಂಧಿಸಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೂ.20 ರವರೆಗೆ ಕಸ್ಟಡಿಗೆ ನೀಡಲಾಗಿದೆ.

ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಹೈದರಬಾದ್‌ನ 27 ವರ್ಷದ ಕೊಂತಂ ತೇಜಸ್ವಿನಿಯನ್ನು ಚೂರಿಯಲ್ಲಿ ಇರಿದು ಕೊಲೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next